ಡಿಜಿಪಿ ಆದೇಶ – ವಾಹನ ಸವಾರರೇ ದಂಡ ಬೀಳಬಹುದು ಎಚ್ಚರ!!! ಟ್ರಾಫಿಕ್ ರೂಲ್ಸ್ ಅನ್ನು ಉಲ್ಲಂಗಿಸಿದರೆ ದಂಡ ಕಟ್ಟಲು ರೆಡಿಯಾಗಿರಿ

ಇನ್ನು ಮುಂದೆ ಟ್ರಾಫಿಕ್ ರೂಲ್ಸ್ ಬಹಳಷ್ಟು ಸ್ಟ್ರಿಕ್ಟ್ ಆಗಲಿದೆ. ಹೌದು ಈಗಾಗಲೇ ಬೆಂಗಳೂರಿನ ನೂತನ ಡಿಜೆಪಿ ಆದೇಶ ಬಂದ ಹಿನ್ನೆಲೆ ಬೆಂಗಳೂರಿನಲ್ಲಿ ಸಂಪೂರ್ಣ ಟ್ರಾಫಿಕ್ ರೂಲ್ಸ್ ಬಹಳಷ್ಟು ಸ್ಟ್ರಿಕ್ಟ್ ಆಗಲಿದೆ. ನೀವು ಕೂಡ ಇನ್ನು ಮುಂದೆ ಗಾಡಿಯನ್ನು ಅಡ್ಡಾದಿಟ್ಟಿ ಟ್ರಾಫಿಕ್ ರೂಲ್ಸ್ ಪಾಲಿಸದೆ ಚಲಾಯಿಸಿದಲ್ಲಿ ದಂಡ ಕಟ್ಟಬೇಕಾಗುತ್ತದೆ ಎಚ್ಚರ. 

ದಂಡಕ್ಕೆ ತಕ್ಕ ರಶೀದಿ ನೀಡಲೇಬೇಕು!

ನೀವು ಕಟ್ಟಿದ  ದಂಡಕ್ಕೆ ಟ್ರಾಫಿಕ್ ಪೊಲೀಸ್ ಕಡ್ಡಾಯವಾಗಿ ರಶೀದಿ ನೀಡಲೇಬೇಕು ಒಂದು ವೇಳೆ ದಂಡ ಕಟ್ಟಿಸಿಕೊಂಡು ನಿಮಗೆ ರಶೀದಿ ನೀಡದಿದ್ದಲ್ಲಿ ನೀವು ಮೇಲಾಧಿಕಾರಿಗಳಿಗೆ ಕಂಪ್ಲೇಂಟ್ ಕೊಡಬಹುದು. ಪಾರದರ್ಶಕತೆಯನ್ನು ಕಾಪಾಡುವ ಸಲುವಾಗಿ ಈ ನಿರ್ಧಾರ ತೆಗೆದುಕೊಂಡಿದ್ದು ಕೆಲವೊಂದು ಟ್ರಾಫಿಕ್ ಪೊಲೀಸ್ ರಶೀದಿ ನೀಡದೆ ದಂಡ ಕಟ್ಟಿಸಿಕೊಳ್ಳುತ್ತಿದ್ದಾರೆ ಇದರಿಂದ ಪಾರದರ್ಶಕತೆಯು ದೂರ ಉಳಿದಿದ್ದ ಕಾರಣ ಈ ನಿರ್ಧಾರ ತೆಗೆದುಕೊಂಡಿದ್ದು ಇನ್ನು ಮುಂದೆ ಕಡ್ಡಾಯವಾಗಿ ಕಟ್ಟಿದ ದಂಡಕ್ಕೆ ರಶೀದಿ ನೀಡಲೇಬೇಕು. 

ರೂಲ್ಸ್ ಪಾಲಿಸದ ವ್ಯಕ್ತಿಗೆ ದಂಡ ಕಟ್ಟಲು ಒತ್ತಾಯಿಸುವಂತಿಲ್ಲ!

ಹೌದು ಇನ್ನು ಮುಂದೆ ರೂಲ್ಸ್ ಪಾಲಿಸದಿದ್ದಲ್ಲಿ ನೀವು ನಿಮ್ಮ ವಾಹನದ ಮೇಲೆ ಬಿದ್ದಿರುವ ದಂಡವನ್ನು ಕಟ್ಟಿ ಕೂಡ ನಿಮ್ಮ ಕೇಸ್ ವಜಾ ಗೊಳಿಸಬಹುದು. ಒಂದು ವೇಳೆ ನೀವೇನಾದರೂ ದಂಡ ಕಟ್ಟದಿದ್ದಲ್ಲಿ ಪೊಲೀಸರು ನಿಮ್ಮನ್ನು ದಂಡ ಕಟ್ಟುವಂತೆ ಒತ್ತಾಯಿಸುವಂತಿಲ್ಲ ಹಾಗೂ ಗಾಡಿಗಳನ್ನು ಸೀಸ್ ಮಾಡುವಂತಿಲ್ಲ. ನಿಮಗೆ ದಂಡ ಕಟ್ಟದಿದ್ದರೆ ಕಾನೂನಿನ ಕ್ರಮಗಳ ಬಗ್ಗೆ ತಿಳಿಸಬೇಕಾಗುತ್ತದೆ ಹೊರತು ದಂಡ ಕಟ್ಟಲು ಒತ್ತಾಯಿಸುವಂತಿಲ್ಲ ಎಂದು ಹೊಸ ಟ್ರಾಫಿಕ್ ರೂಲ್ಸ್ ನ  ಅನ್ವಯದಲ್ಲಿ ತಿಳಿಸಲಾಗಿದೆ. 

ತಕ್ಷಣವೇ ನೋ ಪಾರ್ಕಿಂಗ್ ಗಾಡಿಗಳನ್ನು ತೆರೆವುಗೊಳಿಸಬೇಕು !

ಇಷ್ಟು ದಿನ ನೋ ಪಾರ್ಕಿಂಗ್ ನಲ್ಲಿ ವಾಹನಗಳು ನಿಂತಿದ್ದಲ್ಲಿ ಅವುಗಳನ್ನು ಸೀಸ್ ಮಾಡುವ ಕೆಲಸ ಮಾಡುತ್ತಿರಲಿಲ್ಲ ಗಾಡಿಗಳ ಮೇಲೆ ಫೋಟೋ ತೆಗೆದು ಕೇಸ್ ಹಾಕುವ ಹಾಗೂ ದಂಡ ವಿಧಿಸುವ ಕೆಲಸವನ್ನು ಮಾಡಲಾಗುತ್ತಿತ್ತು ವಾಹನದ ಚಾಲಕ ಬಂದಲ್ಲಿ ದಂಡ ಕಟ್ಟಿಸಿಕೊಂಡು ನೋ ಪಾರ್ಕಿಂಗ್ ನಲ್ಲಿರುವ ಗಾಡಿಯನ್ನು ಬಿಡುಗಡೆಗೊಳಿಸಲಾಗುತ್ತಿತ್ತು ಆದರೆ ಇದೀಗ ಲೋಪಗಳಲ್ಲಿರುವ ಗಾಡಿಗಳನ್ನು ಯಾವುದೇ ದಂಡವಿಲ್ಲದೆ ನೇರವಾಗಿ ಸೀಸ್ ಮಾಡಿ ಅದನ್ನು ಹತ್ತಿರದ ಸ್ಟೇಷನ್ ಗೆ ತೆಗೆದುಕೊಂಡು ಹೋಗಿ, ಗಾಡಿಯನ್ನು ತೆರವುಗೊಳಿಸುವ ಕೆಲಸವನ್ನು ಮಾಡಲಾಗುತ್ತಿದೆ. ಇದರಿಂದ ನೋ ಪಾರ್ಕಿಂಗ್ ನಲ್ಲಿರುವ ಗಾಡಿಗಳನ್ನು ತೆರವುಗೊಳಿಸಿ, ಬೇರೆ ಪಾದಾಚಾರಿಗಳಿಗೆ ಟ್ರಾಫಿಕ್ ರಹಿತವಾಗಿ  ವಾಹನ ಸಂಚಾರಿಸಲು  ಸುಲಭಗೊಳಿಸುವಂತೆ ಸೂಚಿಸಿದೆ. 

 ಹಾಗಾಗಿ ಇನ್ನು ಮುಂದೆ ನೀವು ಟ್ರಾಫಿಕ್ ರೂಲ್ಸ್ ಕಡ್ಡಾಯವಾಗಿ ಪಾಲನೆ ಮಾಡಲೇಬೇಕು ಒಂದು ವೇಳೆ ಪಾಲಿಸದಿದ್ದಲ್ಲಿ ಕಡ್ಡಾಯವಾಗಿ ನೀವು ಟ್ರಾಫಿಕ್ ಫೈನ್ ಕಟ್ಟಬೇಕಾಗುತ್ತದೆ ಎಚ್ಚರ!

error: Content is protected !!