ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳು ಜಾರಿ ಎಲ್ಲಿ ಅರ್ಜಿ ಸಲ್ಲಿಸಬೇಕು ಹಾಗೂ ಶರತುಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ ತಪ್ಪದೆ ನೋಡಿ.

ಕಾಂಗ್ರೆಸ್ ಸರ್ಕಾರವು ನೀಡಿದ ಐದು ಗ್ಯಾರಂಟಿ ಯೋಜನೆಗಳನ್ನು ಜೂನ್ ಒಂದರಿಂದಲೇ ಜಾರಿಗೆ ತರಲು ಮುಂದಾಗಿದ್ದು ಈ ಐದು ಗ್ಯಾರಂಟಿಗಳ ಶರತ್ತುಗಳನ್ನು ಇದೀಗ ಬಿಡುಗಡೆ ಮಾಡಿದೆ ಈ 5 ಗ್ಯಾರಂಟಿಗಳಿಗೆ ನೀವು ಕೂಡ ಅರ್ಜಿ ಸಲ್ಲಿಸಲು ಬಯಸಿದ್ದಲ್ಲಿ ಇರುವಂತಹ ಶರತ್ತುಗಳೇನು? ಹಾಗೂ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಎಲ್ಲಿ ಎಂಬ ಕುರಿತು ಈ ಲೇಖನದಲ್ಲಿ ಸಂಪೂರ್ಣ ಮಾಹಿತಿ ತಿಳಿಸಿಕೊಡಿದ್ದೇವೆ ಹಾಗಾಗಿ ಲೇಖನವನ್ನು ಪೂರ್ತಿ ಓದಿ! 

ಕಾಂಗ್ರೆಸ್ ಸರ್ಕಾರವು ಈಗಾಗಲೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿದ್ದು ಎಲ್ಲಾ ಯೋಜನೆಗಳಿಗೂ ಕೂಡ ಹೊಸ ಹೊಸ ಶರತ್ತುಗಳನ್ನು ವಿಧಿಸಿದೆ. ಸದ್ಯ ಕಾಂಗ್ರೆಸ್ ಸರ್ಕಾರವು ಜೂನ್ 1 ರಿಂದ ಉಚಿತ ಬಸ್ ಪಾಸ್ ಯೋಜನೆ ಹಾಗೂ, 10 ಕೆಜಿ ಅಕ್ಕಿ ಯೋಜನೆಯನ್ನು ಮಾತ್ರವಷ್ಟೇ ಜಾರಿಗೆ ತರಲು ಮುಂದಾಗಿದ್ದು ಉಳಿದ ಮೂರು ಗ್ಯಾರಂಟಿಗಳನ್ನು ತಡವಾಗಿ ಜಾರಿಗೆ ತರುವ ಆದೇಶ ಹೊರಡಿಸಿದೆ.

ಜೂನ್ ಒಂದರಿಂದ ಉಚಿತ 10 ಕೆ.ಜಿ  ಅಕ್ಕಿ ಹಾಗೂ ಉಚಿತ ಬಸ್ ಪಾಸ್ ಯೋಜನೆ ಮಾತ್ರ!

ಈಗಾಗಲೇ ಆರ್ಥಿಕವಾಗಿ ಹಿನ್ನಡೆ ಕಂಡಿರುವ ರಾಜ್ಯ ಸರ್ಕಾರವು ಜನರಿಗೆ ಅಧಿಕಾರಕ್ಕೆ ಬರುತ್ತಿದ್ದ ಹಾಗೆ ನೀಡಿದ್ದ ಭರವಸೆಗಳಲ್ಲಿ ಎರಡು ಭರವಸೆಗಳನ್ನು ಮಾತ್ರ ಅಷ್ಟೇ ಜೂನ್ ಒಂದರಿಂದ ಜಾರಿಗೆ ತರಲು ಮುಂದಾಗಿದ್ದು ಉಚಿತ 10 ಕೆಜಿ  ಅಕ್ಕಿ ಹಾಗೂ ಉಚಿತ ಬಸ್ ಪಾಸ್ ಯೋಜನೆಯನ್ನು ಮಾತ್ರ ಜಾರಿಗೆ ತರಲು ಆದೇಶ ಹೊರಡಿಸಿದೆ. ಈ ಕುರಿತು ಈ ಎರಡು ಯೋಜನೆಗಳಿಗೂ ಕೂಡ ಹೊಸ ಶರತ್ತುಗಳನ್ನು ವಿಧಿಸಿದ್ದು ಶಾರತ್ತುಗಳು ಕೆಳಗಿನಂತಿವೆ.

ಉಚಿತ ಬಸ್ ಪಾಸ್ ಯೋಜನೆಗೆ ಹೊಸ ಶರತ್ತುಗಳು!

  1.  ಉಚಿತ ಬಸ್ ಪಾಸ್ ಯೋಜನೆಗೆ ಕಾಂಗ್ರೆಸ್ ಸರ್ಕಾರವು ಹೊಸ ಶರತ್ತುಗಳನ್ನು ವಿಧಿಸಿದ್ದು ಯಾವ ಗೃಹಿಣಿಗೆ ಮಾತ್ರ ಉಚಿತ ಬಸ್ ಪಾಸ್ ನೀಡಬೇಕೆಂದು ಚಿಂತನೆ ನಡೆಸಿದೆ.
  2. ಎಲ್ಲಾ ಮಹಿಳೆಯರು ಉಚಿತ ಬಸ್ ಪಾಸ್ ಯೋಜನೆ ಅಡಿಯಲ್ಲಿ ಬಸ್ ಪ್ರಯಾಣ ಮಾಡಲು ಸಾಧ್ಯವಾಗುವುದಿಲ್ಲ ಕೇವಲ ಅರ್ಹ ಮತ್ತು ಆಯ್ಕೆಯಾದ ಗೃಹಿಣಿಯರು ಮಾತ್ರವಷ್ಟೇ ಉಚಿತ ಬಸ್ ಪಾಸ್ ಯೋಜನೆಯನ್ನು ಪಡೆಯಬಹುದು.
  3.  ಗೃಹಿಣಿಯ ಬಳಿ ಆಧಾರ್ ಕಾರ್ಡ್ ಇದ್ದರೆ ಸಾಕು ಉಚಿತ ಬಸ್ ಪಾಸ್ ಯೋಜನೆ ಪಡೆಯಬಹುದಾಗಿದೆ
  4.  ಗೃಹಿಣಿಯು ಒಂದು ದಿನಕ್ಕೆ 60 ಕಿಲೋಮೀಟರ್ ವರೆಗೆ ಮಾತ್ರವಷ್ಟೇ ಉಚಿತ ಬಸ್ ಪ್ರಯಾಣ ಮಾಡಬಹುದು.
  5.  ಗೃಹಿಣಿಯರು ಕೇವಲ ಸರ್ಕಾರಿ ನಿಗಮದ ಸ್ಥಳೀಯ ಬಸ್ಗಳಲ್ಲಿ ಮಾತ್ರವಷ್ಟೇ  ಉಚಿತ ಬಸ್ ಪ್ರಯಾಣ ಮಾಡಬಹುದು ಸರ್ಕಾರದ ಐಶಾರಾಮಿಬಸ್ಗಳಲ್ಲಿ ಉಚಿತ ಬಸ್ ಪ್ರಯಾಣ ಮಾಡಲು ಸಾಧ್ಯವಾಗುವುದಿಲ್ಲ.

 ಈ ರೀತಿಯಾಗಿ ಸರ್ಕಾರವು ಉಚಿತ ಬಸ್ ಪಾಸ್ ಯೋಜನೆಗೆ ಹೊಸ ಶರತ್ತುಗಳನ್ನು ವಿಧಿಸಿದೆ.

 ಉಚಿತ 10 ಕೆ.ಜಿ ಅಕ್ಕಿ ಪಡೆಯಲಿರುವ ಶರತ್ತುಗಳೇನು!

ನೀವು ಕೂಡ ಜೂನ್ ಒಂದರಿಂದ ಉಚಿತ 10 ಕೆ.ಜಿ ಅಕ್ಕಿಯನ್ನು ಪಡೆಯಬಹುದು ಆದರೆ ನಿಮ್ಮ ಬಳಿ ಬಿಪಿಎಲ್ ಪಡಿತರ ಚೀಟಿ ಕಡ್ಡಾಯವಾಗಿ ಇರಬೇಕು ಒಂದು ವೇಳೆ ಬಿಪಿಎಲ್ ಪಡಿತರ ಚೀಟಿ ಇಲ್ಲದಿದ್ದಲ್ಲಿ ನೀವು ಉಚಿತ 10 ಕೆಜಿ ಅಕ್ಕಿಯನ್ನು ಪಡೆಯಲು ಸಾಧ್ಯವಾಗುವುದಿಲ್ಲ ಹಾಗೂ ಬಿಪಿಎಲ್ ಪಡಿತರ ಚೀಟಿಯಲ್ಲಿ ಉಚಿತ 10 ಕೆ.ಜಿ ಅಕ್ಕಿ ಪಡೆಯಲು ನಿಮ್ಮ ಬಿಪಿಎಲ್ ಪಡಿತರ ಚೀಟಿಗೆ ಮನೇಲಿರುವ ಎಲ್ಲಾ ಸದಸ್ಯರ ಆಧಾರ್ ಈಕೆ ವೈಸಿ ಕಡ್ಡಾಯವಾಗಿ ಮಾಡಿಸಬೇಕು.

ಈ ರೀತಿಯಾಗಿ ಸರ್ಕಾರವು ಹೊಸ ಶರತುಗಳನ್ನು ಜೂನ್ 1 ರಿಂದ ಜಾರಿಗೆ ತರುತ್ತಿರುವ ಎರಡು ಹೊಸ ಯೋಜನೆಗಳ ಮೇಲೆ ವಿಧಿಸಿದೆ.

ಹಾಗೂ ಈ ಯೋಜನೆಗಳಿಗೆ ನೀವು ಯಾವುದೇ ರೀತಿ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ದರೆ ಸಾಕು ನೀವು ಉಚಿತವಾಗಿ ಬಸ್ ನಲ್ಲಿ ಪ್ರಯಾಣಿಸಬಹುದಾಗಿದೆ ಅದೇ ರೀತಿಯಲ್ಲಿ ನಿಮ್ಮ ಬಳಿ ರೇಷನ್ ಕಾರ್ಡ್ ಇದ್ದರೆ ಸಾಕು ನೀವು ಉಚಿತವಾಗಿ 10 ಕೆಜಿ ಅಕ್ಕಿಯನ್ನು ಪ್ರತಿ ತಿಂಗಳು ಕೂಡ ಪಡೆಯಬಹುದು ಈ ಯೋಜನೆಗಳಿಗೆ ಯಾವುದೇ ಆನ್ಲೈನ್ ಅರ್ಜಿಯ ಅವಶ್ಯಕತೆ ಇರುವುದಿಲ್ಲ ಮುಂದಿನ ಕೆಲ ದಿನಗಳಲ್ಲಿ ಸರ್ಕಾರವು ಗೃಹಲಕ್ಷ್ಮಿ ಯೋಜನೆ ಹಾಗೂ ನಿರುದ್ಯೋಗಿಗಳಿಗೆ 3000 ಹಣ ನೀಡುವ ಯೋಜನೆಯನ್ನು ಜಾರಿಗೆ ತಂದ ಬಳಿಕ ಆ ಯೋಜನೆಗಳಿಗೆ ಮಾತ್ರ ಅಷ್ಟೇ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಕಾಶವಿರುತ್ತದೆ ಈ ಕುರಿತು ಮುಂದಿನ ದಿನಗಳಲ್ಲಿ ಅಧಿಕೃತ ಮಾಹಿತಿಯನ್ನು ನಾವು ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡಲಿದ್ದೇವೆ.

ಲೇಖನವನ್ನು ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು ಶುಭದಿನ!

 

error: Content is protected !!