ಸ್ವಂತ ಜಮೀನು ಇರುವ ಎಲ್ಲಾ ರೈತರಿಗೆ ಕೇಂದ್ರ ಸರ್ಕಾರದ ಹೊಸ ರೂಲ್ಸ್, Karnataka Revenue Department pahani transfer 2023!

ಸ್ವಂತ ಜಮೀನು ಹೊಂದಿರುವ ಎಲ್ಲಾ ರೈತರಿಗೂ ಕೂಡ ಕೇಂದ್ರ ಸರ್ಕಾರವು ಇದೀಗ ಹೊಸ ರೂಲ್ಸ್ ಜಾರಿಗೊಳಿಸಿದೆ, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರವು ಜೊತೆಗೂಡಿ ಈ ಯೋಜನೆಯನ್ನು ಜಾರಿಗೆ ತಂದಿದ್ದು ನಿಮ್ಮ ಬಳಿ ಏನಾದರೂ ಸ್ವಂತ ಜಮೀನು ಇದೆ ಎಂದರೆ ಅಥವಾ ಆಸ್ತಿ ಇದೆ ಎಂದರೆ ನೀವು ಈ ಮಾಹಿತಿಯನ್ನು ಕಡ್ಡಾಯವಾಗಿ ತಿಳಿದುಕೊಳ್ಳಲೇಬೇಕು ಈ ಕುರಿತು ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಹಾಗಾಗಿ ಲೇಖನವನ್ನು ಪೂರ್ತಿ ಓದಿ.

ಸ್ವಂತ ಭೂಮಿಗೆ ಇನ್ನು ಮುಂದೆ ಆಧಾರ್ ಲಿಂಕ್ ಕಡ್ಡಾಯ!

ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರವು ಜೊತೆಗೂಡಿ ಈ ಯೋಜನೆಗೆ ಚಾಲ್ತಿ ನೀಡಿದ್ದು ಒಂದು ದೇಶ ಒಂದು ನೋಂದಣಿ ಯೋಜನೆಯ ಅಡಿಯಲ್ಲಿ ಸ್ವಂತ ಭೂಮಿ ಹೊಂದಿರುವ  ಎಲ್ಲರೂ ಕೂಡ ತಮ್ಮ ಭೂಮಿಗೆ ಆಧಾರ್ ಲಿಂಕ್ ಅನ್ನು ಕಡ್ಡಾಯವಾಗಿ ಮಾಡಿಸಲೇಬೇಕು.

ಈ ಯೋಜನೆಯ ಅಡಿಯಲ್ಲಿ ಭೂ ದಾಖಲೆಗಳನ್ನು ಡಿಜಿಟಲ್  ರೂಪದಲ್ಲಿ ಇಡುವ ಉದ್ದೇಶದಿಂದ ಒಂದು ದೇಶ ಒಂದು ನೊಂದಣಿ ಯೋಚನೆ ಅಡಿಯಲ್ಲಿ ಆಧಾರ್ನೊಂದಿಗೆ ಭೂ ದಾಖಲೆಗಳನ್ನು ಕೂಡ ಲಿಂಕ್ ಮಾಡಲು ಸರ್ಕಾರವು ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಭಾರತದ ನಾಗರಿಕನಿಗೆ ಆಧಾರ್ ಕಾರ್ಡ್ ಪ್ರಮುಖ ದಾಖಲಾತಿಯಾಗಿದ್ದು ಇದೀಗ ಆಧಾರ್ ಕಾರ್ಡ್ ಎಲ್ಲಾ ಕಡೆಗಳಲ್ಲೂ ಕೂಡ ಬಳಕೆಯಾಗುತ್ತಿದೆ ಅದೇ ರೀತಿಯಲ್ಲಿ ಆಧಾರ್ನೊಂದಿಗೆ ಇದೀಗ ಭೂ ದಾಖಲೆಗಳನ್ನು ಕೂಡ ಲಿಂಕ್ ಮಾಡಲು ಸರ್ಕಾರವು ಮಹತ್ತರ ಪಣತೊಟ್ಟಿದ್ದು ಈ ಯೋಜನೆಗೆ ಇದೀಗ ಚಾಲ್ತಿ ನೀಡಿದೆ.

ಭೂ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಇಡುವ ಉದ್ದೇಶದಿಂದ ಐಪಿ ಆಧಾರಿತ ತಂತ್ರಜ್ಞಾನವನ್ನು ಜಾರಿಗೊಳಿಸಿದ್ದು ರೈತರ ಎಲ್ಲಾ ಭೂ ದಾಖಲೆಗಳನ್ನು ಆಧಾರ್ ಕಾರ್ಡ್ ನೊಂದಿಗೆ ಸಂಪೂರ್ಣ ಡಿಜಿಟಲ್ ರೂಪದಲ್ಲಿ ಇನ್ನು ಮುಂದೆ ಇಡಲಾಗುತ್ತದೆ. ಈ ಡಿಜಿಟಲ್ ರೂಪದಲ್ಲಿ ಇಡುವ ಎಲ್ಲಾ ಭೂ ದಾಖಲೆಗಳು ಕೂಡ ರೈತರಿಗೆ ಬಹುತೇಕ ಕಡೆಗಳಲ್ಲಿ ಉಪಯುಕ್ತಕರವಾಗಿದ್ದು. ಯಾವುದೇ ಭೂ ಧಾಖಲೆಗಳ ಕಳ್ಳತನ ಹಾಗೂ ಅದರ ಸಂಪೂರ್ಣ ನಾಶ ಮಾಡಲು ಸಾಧ್ಯವಾಗುವುದಿಲ್ಲ ಇತ್ತೀಚಿನ ದಿನಗಳಲ್ಲಿ  ಭೂ ದಾಖಲೆಗಳ  ವಂಚನೆಗಳು ಅತಿ ಹೆಚ್ಚಾಗಿ ನಡೆಯುತ್ತಿದ್ದು ಒಂದೇ ಭೂ ದಾಖಲೆಯೊಂದಿಗೆ ಬಹುತೇಕ ಜನರಿಗೆ ಅದನ್ನು ನೋಂದಾಯಿಸಿಕೊಡುವಂತಹ ವಂಚನೆಗಳು ಹೆಚ್ಚಾಗಿರುವುದರಿಂದ ಸರ್ಕಾರವು ಡಿಜಿಟಲ್ ರೂಪದಲ್ಲಿ ಭೂ ದಾಖಲೆಗಳನ್ನು ಸಂಗ್ರಹಿಸಲು ಮುಂದಾಗಿದೆ.

ಈ ಮುಂಚೆಯೂ ಕೂಡ ಸರ್ಕಾರವು ದಾಖಲೆಗಳೊಂದಿಗೆ ಆಧಾರ್ ಕಾರ್ಡನ್ನು ಲಿಂಕ್ ಮಾಡಲು ಸೂಚಿಸಿದ್ದು ಯಾವುದೇ ಡಿಜಿಟಲ್ ವೆಬ್ಸೈಟ್ಗಳು ಇಲ್ಲದೆ ಇರುವ ಕಾರಣ ಆಧಾರ್ ಮತ್ತು ಭೂ ದಾಖಲೆಗಳ ಲಿಂಕನ್ನು ಜಾರಿಗೆ ತರಲಾಗಿರಲಿಲ್ಲ ಆದರೆ ಇದೀಗ ಬಹುತೇಕ ಕಡೆಗಳಲ್ಲಿ ಡಿಜಿಟಲೈಸ್ ಆಗಿರುವ ಕಾರಣ ಭೂಮಿ ರಿಜಿಸ್ಟರ್ ಕೂಡ ಆನ್ಲೈನ ಮೂಲಕವೇ ಆಗುತ್ತಿದೆ, ಈಗಾಗಲೇ ಮೇ ತಿಂಗಳಿನಿಂದಲೇ ಆನ್ಲೈನ್ ಮೂಲಕ  ಭೂಮಿ ರಿಜಿಸ್ಟರ್ ಮಾಡಿಸುವ ಯೋಜನೆಯನ್ನು ಜಾರಿಗೆ ತಂದಿದ್ದು ಅಗತ್ಯವಿರುವ ದಾಖಲಾತಿಗಳನ್ನು ಆನ್ಲೈನ ಮೂಲಕವಷ್ಟೇ ಅಪ್ಲೋಡ್ ಮಾಡಿ ಅದು ನೀಡುವ ದಿನಾಂಕದಂದು ಬಂದು ಹತ್ತಿರದ ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ಭೂಮಿ ರಿಜಿಸ್ಟರ್ ಮಾಡಿಸಿಕೊಳ್ಳಬೇಕು ಹಾಗಾಗಿ ಎಲ್ಲಾ ಕಡೆಗಳಲ್ಲೂ ಕೂಡ ಭೂ ದಾಖಲೆಗಳನ್ನು ಹಾಗೂ ಭೂಮಿಯ ರಿಜಿಸ್ಟರ್ ಅನ್ನು ಕೂಡ ಆನ್ಲೈನ್ ಮೂಲಕವೇ ಮಾಡಿಸಿ ಆಧಾರ್ ಲಿಂಕ್ ಮಾಡಲು ಸೂಚನೆ  ಹೊರಡಿಸಿದೆ.

ಈ ಯೋಜನೆಯಿಂದ ಬಹುತೇಕ ಭೂಮಿ ಹೊಂದಿರುವ ರೈತರು ತಮ್ಮ ಆಧಾರದೊಂದಿಗೆ ಭೂಮಿಯನ್ನು ಲಿಂಕ್ ಮಾಡುವುದರಿಂದ ಯಾವುದೇ ವಂಚನೆಗೆ ಒಳಗಾಗುವುದು ಹಾಗೂ ಭೂಮಿಯ ದಾಖಲಾತಿಗಳನ್ನು ನಾಶ ಮಾಡುವುದು ಸಾಧ್ಯವಾಗುವುದಿಲ್ಲ ಹಾಗೂ ರೈತರು ಈ ಡಿಜಿಟಲ್ ರೂಪದಲ್ಲಿರುವ ಭೂ ದಾಖಲೆಗಳೊಂದಿಗೆ ಯಾವುದೇ ಬ್ಯಾಂಕಿನಲ್ಲಿ ಅತಿ ಬೇಗನೆ ಕೃಷಿ ಸಾಲಗಳನ್ನು ತೆಗೆದುಕೊಳ್ಳಲು ಕೂಡ ಉಪಯುಕ್ತಕರವಾಗಲಿದೆ ಎಲ್ಲಾ ದಾಖಲಾತಿಗಳು ಕೂಡ ಆಧಾರ್ ನಲ್ಲಿಯೇ ಇರುವುದರಿಂದ ರೈತರು ಯಾವುದೇ ಕೃಷಿ ಸಾಲ ಹಾಗೂ ಇನ್ನಿತರ ಕೆಲಸಗಳಿಗೆ ತೊಂದರೆ  ತೆಗೆದುಕೊಳ್ಳುವ ಅಥವಾ ಕಾಯುವ ಅವಶ್ಯಕತೆ ಇರುವುದಿಲ್ಲ.

 ಲೇಖನವನ್ನು ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು ಶುಭದಿನ!

error: Content is protected !!