ಆಗಸ್ಟ್ 1ರಿಂದ ಗೃಹಿಣಿಯ ಬ್ಯಾಂಕ್ ಖಾತೆಗೆ 2000 ಹಣ ನೇರವಾಗಿ ಜಮಾ ಆಗಲಿದೆ ಸಿಎಂ ಸಿದ್ದರಾಮಯ್ಯ ಅಧಿಕೃತ ಘೋಷಣೆ!

ಈಗಾಗಲೇ ರಾಜ್ಯದ ಗೃಹಿಣಿಯರು ಗೃಹಲಕ್ಷ್ಮಿ ಯೋಜನೆಗಾಗಿ ಕಾದು ಕುಳಿತಿದ್ದು ಅರ್ಜಿ ಫಾರಂ ಅನ್ನು ಕೂಡ  ಈಗಾಗಲೇ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಈ ಕುರಿತು ಬಹಳಷ್ಟು ಗೃಹಿಣಿಯರು ಈಗಾಗಲೇ ಅರ್ಜಿ ಫಾರಂ ಡೌನ್ಲೋಡ್ ಮಾಡಿಕೊಂಡು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದು ಎರಡು ಸಾವಿರ ಹಣ ಗೃಹಿಣಿಯರ ಬ್ಯಾಂಕ್ ಖಾತೆಗೆ ಯಾವಾಗಿಂದ ಬರಬಹುದು ಎಂಬ ಕುರಿತು ಅಧಿಕೃತ ಮಾಹಿತಿ ಲಭ್ಯವಾಗಿದೆ ಈ ಕುರಿತು ಈ ಲೇಖನದಲ್ಲಿ ತಿಳಿಯೋಣ!

ಗೃಹಲಕ್ಷ್ಮಿ ಯೋಜನೆಗೆ ಇರುವ ಅರ್ಹತೆಗಳು!

ರಾಜ್ಯದ ಗೃಹಿಣಿಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಮುಂದಾದಲ್ಲಿ ಕಡ್ಡಾಯವಾಗಿ ಗೃಹಿಣಿಯು ಬಿಪಿಎಲ್ ಎಪಿಎಲ್ ಅಥವಾ ಅಂತ್ಯದ ಕಾರ್ಡನ್ನು ಹೊಂದಿರಲೇಬೇಕಾಗುತ್ತದೆ ಒಂದು ವೇಳೆ ಯಾವುದೇ ಕಾರ್ಡ್ ಹೊಂದಿಲ್ಲದಿದ್ದಲ್ಲಿ ಗೃಹಿಣಿಯು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆ ಪಡೆಯುವುದಿಲ್ಲ!

ಹಾಗೂ ಗೃಹಲಕ್ಷ್ಮಿ  ಅರ್ಜಿ ಸಲ್ಲಿಸುವ ಗೃಹಿಣಿಯು ಕಡ್ಡಾಯವಾಗಿ ಅರ್ಜಿ ಫಾರಂ ಡೌನ್ಲೋಡ್ ಮಾಡಿಕೊಂಡು ಅರ್ಜಿ ನಮೂನೆಯಲ್ಲಿರುವ ಎಲ್ಲಾ ಮಾಹಿತಿಗಳನ್ನು ಓದಿ ಬಳಿಕವಷ್ಟೇ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿ ನಮೂನೆಯಲ್ಲಿ ತಿಳಿಸಿರುವ ಹಾಗೆ ಮಹಿಳೆಯು ನಾನೇ ಮನೆಯ ಯಜಮಾನಿ ಎಂದು ಒಪ್ಪಿ, ಮನೆಯ ಸದಸ್ಯರೊಂದಿಗೆ ಚರ್ಚಿಸಿ ಬಳಿಕವಷ್ಟೇ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆ ಮಾಡಬೇಕು. ಒಂದೆ   ಮನೆಯ ಬೇರೆಯ ಮಹಿಳೆಯು ತಕರಾರು ಮಾಡಿದ್ದಲ್ಲಿ  ನನಗೆ ಸರ್ಕಾರ ನೀಡಿರುವ ಎಲ್ಲಾ ಹಣವನ್ನು ಹಿಂದಿರುಗಿಸುತ್ತೇನೆ ಹಾಗೂ ಕಾನೂನು ಕ್ರಮಕ್ಕೆ ಬದ್ಧಳಾಗಿರುತ್ತೇನೆ ಎಂದು ಸಹಿ ಮಾಡಿ ಬಳಿಕವಷ್ಟೇ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವುದು ಸೂಕ್ತವಾಗಿರುತ್ತದೆ. ಹಾಗಾಗಿ ನಿಮ್ಮ ಬಳಿ ಇರುವ ಬಿಪಿಎಲ್ ಎಪಿಎಲ್ ಅಥವಾ ಅಂತ್ಯೋದಯ ಯಾವುದೇ ಕಾರ್ಡ್ ನಲ್ಲಿ ಹೆಸರು ಮತ್ತು ಫೋಟೋ ಇರುವ ಮಹಿಳೆ ಮಾತ್ರವಷ್ಟೇ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆ ಪಡೆದಿರುತ್ತಾರೆ.

ಆಗಸ್ಟ್ ಒಂದಕ್ಕೆ ಮಹಿಳೆಯ ಬ್ಯಾಂಕ್ ಖಾತೆಗೆ 2000 ಹಣ ಜಮಾ ಆಗಲಿದೆ!

ನೂತನ ಸಿಎಂ ಸಿದ್ದರಾಮಯ್ಯ ಈಗಾಗಲೇ ತಿಳಿಸಿದ ಹಾಗೆ ಜೂನ್ 15ರಿಂದ ಜುಲೈ 15 ರ ವರೆಗೂ ಕೂಡ ಗೃಹಲಕ್ಷ್ಮಿ  ಯೋಜನೆಗೆ ಅರ್ಜಿ ಸಲ್ಲಿಕೆ ನಡೆಯಲಿದ್ದು ಗೃಹಿಣಿಯು ಅರ್ಜಿ ಸಲ್ಲಿಕೆ ಮಾಡಬಹುದು. ಅರ್ಜಿ ಸಲ್ಲಿಸಿದ ಬಳಿಕ ಜುಲೈ 15 ರಿಂದ ಆಗಸ್ಟ್ವರೆಗೂ ಅರ್ಜಿ ಪರಿಶೀಲನೆ ನಡೆಸಿ ಆಗಸ್ಟ್ ತಿಂಗಳಿನಿಂದಲೇ ಗೃಹಿಣಿಯ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 2000 ಹಣವನ್ನು ವರ್ಗಾವಣೆ ಮಾಡುತ್ತೇವೆ ಎಂದು ಸರ್ಕಾರ ತಿಳಿಸಿದೆ ಹಾಗಾಗಿ ಎಲ್ಲರೂ ಕೂಡ ಜುಲೈ 15 ರ ಒಳಗಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ಆಗಸ್ಟ್ ತಿಂಗಳಿನಿಂದಲೇ ಅಧಿಕೃತವಾಗಿ ಸರ್ಕಾರದಿಂದ ಸಿಗುವ 2000 ಹಣವನ್ನು ನೇರ ನಿಮ್ಮ ಬ್ಯಾಂಕ್ ಖಾತೆಗೆ ಪಡೆದುಕೊಳ್ಳಬಹುದು.

ಅರ್ಜಿ ಸಲ್ಲಿಸಲು ಯಾವುದೇ ಹಣದ ಅವಶ್ಯಕತೆ ಇಲ್ಲ!

ಹೌದು ನೀವೇನಾದರೂ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಮುಂದಾದಲ್ಲಿ ಯಾವುದೇ ಹಣ ಪಾವತಿ ಮಾಡುವ ಅವಶ್ಯಕತೆ ಇರುವುದಿಲ್ಲ ನೀವು ಕೇವಲ ಅರ್ಜಿ ಸಲ್ಲಿಕೆ ಮಾಡಲು ಯಾವುದೇ ಡಿಜಿಟಲ್ ಸೇವಾಕೇಂದ್ರ ಅಥವಾ ಕಂಪ್ಯೂಟರ್ ಸೆಂಟರ್ ಗೆ ಭೇಟಿ ಮಾಡಿದ್ದಲ್ಲಿ ಅರ್ಜಿ ಪ್ರೊಸೆಸ್‌ಗೆ ಮಾತ್ರವಷ್ಟೇ ನೀವು ಹಣ ಪಾವತಿ ಮಾಡತಕ್ಕದ್ದು ಬೇರಾವದೇ ಸರ್ಕಾರದ ಅಧಿಕೃತ ಅರ್ಜಿ ಸಲ್ಲಿಕೆ ಹಣ ಇರುವುದಿಲ್ಲ. ಇದು ಸಂಪೂರ್ಣ ಉಚಿತವಾಗಿರುತ್ತದೆ.

 ಅರ್ಜಿ ಸಲ್ಲಿಸುವ ಮುನ್ನ ಆಧಾರ್ ಬ್ಯಾಂಕ್ ಮ್ಯಾಪಿಂಗ್ ಆಗಿರಲಿ!

 ಬಹಳಷ್ಟು ಮಹಿಳೆಯರಿಗೆ  ಆಧಾರ್ ಮ್ಯಾಪಿಂಗ್ ತಿಳಿದಿಲ್ಲ ನೀವೇನಾದರೂ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಲ್ಲಿ ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ಆಧಾರ್ ಕಾರ್ಡಿಗೆ ಬ್ಯಾಂಕ್ ಖಾತೆ ಲಿಂಕ್ ಆಗಿದೆಯಾ ಇಲ್ಲವಾ ಎಂದು ಪರಿಶೀಲಿಸಿಕೊಳ್ಳುವುದು ಬಹಳ ಸೂಕ್ತವಾಗಿರುತ್ತದೆ. ಬಹಳಷ್ಟು ಜನ ತಮ್ಮ ಆಧಾರ್ಕಾಡಿಗೆ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿರುವುದಿಲ್ಲ ಒಂದು ವೇಳೆ ಲಿಂಕ್ ಆಗಿಲ್ಲದಿದ್ದಲ್ಲಿ ಈ ಕೊಡಲೇ ಲಿಂಕ್ ಮಾಡಿಸಿಕೊಳ್ಳುವುದು ಸೂಕ್ತ ಯಾಕೆಂದರೆ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಮಾತ್ರವಷ್ಟೇ ಡಿ ಬಿ ಟಿ  ಅಂದರೆ ಡೈರೆಕ್ಟ್ ಬೆನೆಫಿಟ್ ಟ್ರಾನ್ಸ್ಫರ್ ಅಡಿಯಲ್ಲಿ ಹಣ ವರ್ಗಾವಣೆ ಮಾಡಲಾಗುತ್ತದೆ ಆದ ಕಾರಣ ನಿಮ್ಮ ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ಆಧಾರ್ ಲಿಂಕ್ ಮಾಡಿಸುವುದು ಸೂಕ್ತವಾಗಿರುತ್ತದೆ.

ಒಂದು ವೇಳೆ ಲಿಂಕ್ ಆಗಿಲ್ಲದಿದ್ದಲ್ಲಿ ನಿಮ್ಮ ಹತ್ತಿರದ ಯಾವುದೇ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕ ನೀವು ನಿಮ್ಮ ಆಧಾರ್ ಕಾರ್ಡ್ಗೆ ಬ್ಯಾಂಕ್ ಮ್ಯಾಪಿಂಗ್ ಅರ್ಜಿ ಫಾರಂ ತೆಗೆದುಕೊಂಡು ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಿದ 15 ದಿನದ ಒಳಗಾಗಿ ನಿಮ್ಮ ಆಧಾರ್ ಕಾರ್ಡ್ ಗೆ ಬ್ಯಾಂಕ್ ಮ್ಯಾಪಿಂಗ್ ಆಗಲಿದೆ.

ಇಲ್ಲಿಯವರೆಗೆ ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು ಶುಭದಿನ!

error: Content is protected !!