ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾವ ಯಾವ ದಾಖಲಾತಿಗಳು ಬೇಕು! ಸಿಎಂ ಸಿದ್ದರಾಮಯ್ಯ ಅಧಿಕೃತ ಆದೇಶ ಇಲ್ಲಿದೆ!

ನೀವು ಕೂಡ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಮುಂದಾದಲ್ಲಿ ನೀವು ಕಡ್ಡಾಯವಾಗಿ ಈ ದಾಖಲಾತಿಗಳನ್ನು ಹೊಂದಿರಬೇಕು ಈಗಾಗಲೇ ರಾಜ್ಯ ಸರ್ಕಾರವು ಅಧಿಕೃತವಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಕುರಿತು ಮಾಹಿತಿ ನೀಡಿದ್ದು ನೀವು ಕಡ್ಡಾಯವಾಗಿ  ಈ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬೇಕು. 

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಈ ದಾಖಲಾತಿಗಳು ಕಡ್ಡಾಯ!

ಹೌದು ನೀವು ಕೂಡ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಮುಂದದಲ್ಲಿ ಈ ದಾಖಲಾತಿಗಳನ್ನು ಕಡ್ಡಾಯವಾಗಿ ಹೊಂದಿರಬೇಕು. ಈಗಾಗಲೇ ನೂತನ ಸಿಎಂ ಸಿದ್ದರಾಮಯ್ಯ ತಾವು ನೀಡಿದ ಐದು ಭರವಸೆಗಳ ಮೇಲೂ ಕೂಡ ಚರ್ಚೆ ನಡೆಸಿ ಅಧಿಕೃತ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ನಿರ್ಧಾರ ತೆಗೆದುಕೊಂಡು ಇದೀಗ ಮಾಧ್ಯಮ ಸುದ್ದಿಗೋಷ್ಠಿ ನಡೆಸಿದ್ದಾರೆ, ಈ ಮಾಧ್ಯಮ ಸುದ್ದಿಗೋಷ್ಠಿಯಲ್ಲಿ ನೂತನ ಸಿಎಂ ಸಿದ್ದರಾಮಯ್ಯ ಗೃಹಲಕ್ಷ್ಮಿ ಯೋಜನೆಯ ಕುರಿತು ಯಾವ ಯಾವ ದಾಖಲಾತಿಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ

ಗೃಹಲಕ್ಷ್ಮಿ  ಯೋಜನೆಗೆ ಅರ್ಜಿ ಸಲ್ಲಿಸಲು ದಾಖಲಾತಿಗಳು ಕೆಳಗಿನಂತಿವೇ!

  1. ಆಧಾರ್ ಕಾರ್ಡ್ ಕಡ್ಡಾಯವಾಗಿದೆ
  2.  ಬ್ಯಾಂಕ್ ಖಾತೆಯ ವಿವರಗಳು
  3.  ಬಿಪಿಎಲ್ ಅಥವಾ ಏ ಪಿ ಎಲ್ ಪಡಿತರ ಚೀಟಿ

ಇಷ್ಟು ದಾಖಲಾತಿಗಳನ್ನು ಕಡ್ಡಾಯವಾಗಿ ಮಹಿಳೆಯರು ಹೊಂದಿರಬೇಕೆಂದು ನೂತನ ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.

ಗೃಹ ಲಕ್ಸ್ಮಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ!

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ನೀವು ಈ ಮೂರು ದಾಖಲಾತಿಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗಿದ್ದು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ಅಧಿಕೃತ ವೆಬ್ಸೈಟ್ ಇನ್ನೂ ಬಿಡುಗಡೆ ಮಾಡಿಲ್ಲ. ಸದ್ಯ ಈಗಷ್ಟೇ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಚರ್ಚಿಸಿ ಈ ಕುರಿತು ಅಧಿಕೃತ ಆದೇಶವನ್ನು ರಾಜ್ಯದ ಜನತೆಗೆ ತಿಳಿಸಿರುವ ರಾಜ್ಯ ಸರ್ಕಾರವು ಮುಂದಿನ 15 ದಿನದಲ್ಲಿ ಗುರುಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಅಧಿಕೃತವಾದಂತಹ ವೆಬ್ಸೈಟ್ ಬಿಡುಗಡೆ ಮಾಡಲಿದೆ. ಅಧಿಕೃತ ವೆಬ್ಸೈಟ್ ಬಿಡುಗಡೆಯಾದ ಬಳಿಕ ಗೃಹಲಕ್ಷ್ಮಿ ಯೋಜನೆಗೆ ರಾಜ್ಯದ ಎಲ್ಲಾ ಗೃಹಿಣಿಯರು ಕೂಡ ಅರ್ಜಿ ಸಲ್ಲಿಸಬಹುದು.

ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಮನೆಯ ಯಜಮಾನಿಗೆ ಮಾತ್ರವಷ್ಟೇ ಉಚಿತ  2000 ಹಣವನ್ನು ನೀಡಲಾಗುತ್ತಿದ್ದು ಮನೆಯ ಯಜಮಾನಿ ಯಾರು ಎಂದು ಗೃಹಿಣೀಯೇ  ನಿರ್ಧರಿಸಿ ಸರ್ಕಾರಕ್ಕೆ ತಿಳಿಸಬೇಕಾಗುತ್ತದೆ. ನಿಮ್ಮ ಬಳಿ  ನಾಲ್ಕು ಅಥವಾ ಐದು ಪಡಿತರ ಚೀಟಿಗಳಿದ್ದರೂ ಕೂಡ ಮನೆಯ ಯಜಮಾನಿ ಯಾರು ಎಂದು ಗೃಹಿಣೀಯ ನಿರ್ಧರಿಸಿ ಅರ್ಜಿಯನ್ನು ಸಲ್ಲಿಸಬೇಕು ಎಂದು ನೂತನ ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.

ಸದ್ಯ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಎಲ್ಲರೂ ಕೂಡ ಹಣವನ್ನು ಪಡೆಯಬಹುದಾಗಿದ್ದು ಯಾವುದೇ ಜಾತಿ ಭೇದ ಹಾಗೂ ಭಾಷೆಯ ಮಿತಿ ಅಥವಾ ಶರತುಗಳನ್ನು ಸರ್ಕಾರವು ವಿಧಿಸಿಲ್ಲ ಈ ಯೋಜನೆಗೆ ಅರ್ಹ ಫಲಾನುಭವಿಗಳು ಯಾರು ಬೇಕಾದರೂ ಕೂಡ ಅರ್ಜಿಯನ್ನು ಆನ್ಲೈನ ಮೂಲಕವೇ ನೋಂದಣಿ ಮಾಡಿಕೊಂಡು ಸರ್ಕಾರದಿಂದ ಸಿಗುವ ಉಚಿತ ಎರಡು ಸಾವಿರ ಹಣವನ್ನು ಪ್ರತಿ ತಿಂಗಳು ಪಡೆಯಬಹುದಾಗಿದೆ ಈ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು 2000 ದಂತೆ ವರುಷಕ್ಕೆ 24,000 ಹಣವು ನೇರವಾಗಿ ಗೃಹಿಣಿಯ ಬ್ಯಾಂಕ್  ಖಾತೆಗೆ ಜಮಾ ಆಗಲಿದೆ.

ಲೇಖನವನ್ನು ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು ಶುಭದಿನ!

error: Content is protected !!