ಗೃಹಲಕ್ಷ್ಮಿ ಯೋಜನೆ : ಮಹಿಳೆಯರು ಪ್ರತಿ ತಿಂಗಳು 2000 ಹಣ ಪಡೆಯಲು ಗೃಹಲಕ್ಷ್ಮಿ ಯೋಜನೆ ಅರ್ಜಿ ಫಾರಂ ಬಿಡುಗಡೆ ಮಾಡಲಾಗಿದೆ ಅರ್ಜಿ ಫಾರಂ ಇಲ್ಲಿದೆ!

ಕೊನೆಗೂ ರಾಜ್ಯದ ಎಲ್ಲಾ ಮಹಿಳೆಯರಿಗೂ ಕೂಡ ನೂತನ ಸಿಎಂ ಸಿದ್ದರಾಮಯ್ಯ ಗುಡ್ ನ್ಯೂಸ್ ನೀಡಿದ್ದು ಮಹಿಳೆಯರು ಈ ಕೂಡಲೇ ಪ್ರತಿ ತಿಂಗಳು 2000 ಹಣ ಪಡೆಯುವ ಗೃಹಲಕ್ಷ್ಮಿ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಕುರಿತು ಇದೀಗ ಅರ್ಜಿ ಫಾರಂ ಬಿಡುಗಡೆ ಮಾಡಲಾಗಿದ್ದು ನೀವು  ಕಡ್ಡಾಯವಾಗಿ ಬೇಕಾಗಿರುವ ಎಲ್ಲ ದಾಖಲಾತಿಗಳೊಂದಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಅರ್ಜಿ ಫಾರಂ ಡೌನ್ಲೋಡ್ ಮಾಡುವ ಕುರಿತು ಹಾಗೂ ಅರ್ಜಿ ಸಲ್ಲಿಸುವ ಕುರಿತು ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ ಹಾಗಾಗಿ ಲೇಖನವನ್ನು ಪೂರ್ತಿ ಓದಿ. 

ಆಧಾರ್ ಕಾರ್ಡ್ ಇದ್ರೆ ಸಾಕು ಮಹಿಳೆಯರಿಗೆ ಸಿಗಲಿದೆ  ಎರಡು ಸಾವಿರ ಹಣ!

ಈ ಕುರಿತು ರಾಜ್ಯದ ನೂತನ ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದು ಮಹಿಳೆಯರು ಕೇವಲ 2000 ಹಣ ಪಡೆಯಲು ತಮ್ಮ ಬಳಿ ಆಧಾರ್ ಕಾರ್ಡ್ ಹೊಂದಿದ್ದರೆ ಸಾಕು, ಬೇರಾವದೇ ಮುಖ್ಯ ದಾಖಲಾತಿಯ ಅವಶ್ಯಕತೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಈ ಮುಂಚೆ ಮಹಿಳೆಯರು ಉಚಿತ ಎರಡು ಸಾವಿರ ಹಣಕ್ಕಾಗಿ ಯಾವ ಯಾವ ದಾಖಲೆಗಳನ್ನು ಕೇಳಬಹುದು ಮತ್ತು ಇದಕ್ಕೆ ಶರತ್ತುಗಳು ಏನಿರಬಹುದು ಎಂದು ಗೊಂದಲದಲ್ಲಿದ್ದ ಕಾರಣ ಈ ಕುರಿತು  ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದು ಯಾವುದೇ ದಾಖಲಾತಿಯ ಅವಶ್ಯಕತೆ ಇಲ್ಲ ಕೇವಲ ಆಧಾರ್ ಕಾರ್ಡ್ ಇದ್ರೆ ಸಾಕು ಎಂದು ಸ್ಪಷ್ಟಪಡಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಟೆಲಿಗ್ರಾಂ ಸೇರಿclick here to join

ನೀವು ಕೂಡ ಈ ಯೋಜನೆಯ ಅಡಿಯಲ್ಲಿ ಫಲಾನುಭವಿಗಳಾಗಲು ಬಯಸಿದ್ದಲ್ಲಿ ಈ ಕೂಡಲೇ ಅರ್ಜಿ ಫಾರಂ ಅನ್ನು ಡೌನ್ಲೋಡ್ ಮಾಡಬಹುದು ಹಾಗು ಅಗತ್ಯವಿರುವ ಒಂದಷ್ಟು ದಾಖಲಾತಿಗಳೊಂದಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸಿದ ಒಂದು ತಿಂಗಳ ಬಳಿಕ ನಿಮ್ಮ ಅರ್ಜಿಯನ್ನು ಪರಿಶೀಲಿಸಿ ನಿಮಗೆ ನೇರ ನಿಮ್ಮ ಬ್ಯಾಂಕ್ ಖಾತೆಗೆ ಹಣವನ್ನು ಪ್ರತಿ ತಿಂಗಳು ವರ್ಗಾವಣೆ ಮಾಡಲಾಗುತ್ತದೆ.ಅರ್ಜಿ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ : Download here

 ಆಧಾರ್ ಕಾರ್ಡ್ ನ ಮೂಲಕ ಗೃಹಿಣಿಯರ ಬ್ಯಾಂಕ್ ಖಾತೆಗೆ ಹಣ ಜಮಾ!

ಸದ್ಯ ಆಧಾರ್ ಕಾರ್ಡ್ ಬಳಸಿಕೊಂಡು ಎಲ್ಲಾ ಕೆಲಸಗಳು ಕೂಡ ನಡೆಯುತ್ತಿರುವ ಕಾರಣ ಆಧಾರ್ ಕಾರ್ಡ್ ಒಂದು ಬಹು ಮುಖ್ಯ ದಾಖಲೆಯಾಗಿದೆ ವ್ಯಕ್ತಿಯ ಸಂಪೂರ್ಣ ಹೆಸರು ವಿಳಾಸ ಬೆರಳಚ್ಚುಗಳು ಹಾಗೂ ಕಣ್ಣಿನ ಅಚ್ಚುಗಳು ಕೂಡ ಆಧಾರ್ ಕಾರ್ಡ್ ನಲ್ಲಿ  ಸೇರಿದ್ದು ಇದು ಸದ್ಯ ಎಲ್ಲ ಕೆಲಸಕ್ಕೂ ಕೂಡ ಸರಿಹೊಂದುವ ದಾಖಲೆಯಾಗಿದೆ  ಇದೀಗ ಆಧಾರ್ ಕಾರ್ಡ್ ಬಳಸಿಕೊಂಡು ಸರ್ಕಾರವು ಮಹಿಳೆಯರಿಗೆ ಉಚಿತ ಎರಡು ಸಾವಿರ ಹಣವನ್ನು ನೇರ ಬ್ಯಾಂಕ್ ಖಾತೆಗೆ ನೀಡಲು ಮುಂದಾಗಿದೆ.

 ಆಧಾರ್ ಕಾರ್ಡ್ ಗೆ ಬ್ಯಾಂಕ್ ಖಾತೆ ಕಡ್ಡಾಯವಾಗಿ ಲಿಂಕ್ ಆಗಿರಬೇಕು!

ಬಹಳಷ್ಟು ಜನ ಮಹಿಳೆಯರಿಗೆ ಈ ವಿಚಾರ ತಿಳಿದಿಲ್ಲ ನೀವು  ಆಧಾರ್ ಕಾರ್ಡ್ ಬಳಸಿಕೊಂಡು ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಸಿಗುವ ಪ್ರತಿ ತಿಂಗಳು 2000 ಹಣಕ್ಕೆ ಅರ್ಜಿ ಸಲ್ಲಿಸಿದ ಬಳಿಕ ನಿಮ್ಮ ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ನೇರವಾಗಿ ಡಿ ಬಿ ಟಿ DBT ಅಂದರೆ ಡೈರೆಕ್ಟ್ ಬೆನೆಫಿಟ್ ಟ್ರಾನ್ಸ್ಫರ್ ನ ಮೂಲಕ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ. ಈ ಮುಂಚೆ  ಯಾವುದೇ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಹಣ ಕೊಡಬೇಕೆಂದರೆ ಅದನ್ನು ನೇರವಾಗಿ ಚೆಕ್ನ ಮೂಲಕ ಅಥವಾ ಕ್ಯಾಶ್ನ Cash ಮೂಲಕ ನೀಡಲಾಗುತ್ತಿತ್ತು ಇದೀಗ ಬಿ ಎಂ ಕಿಸಾನ್  ಯೋಜನೆ ಅಡಿಯಲ್ಲಿ ಕೂಡ ರೈತರ ಬ್ಯಾಂಕ್ ಖಾತೆಗೆ ಹಣವು ನೇರವಾಗಿ ಜಮೆ ಮಾಡುವ ಉದ್ದೇಶದಿಂದ ಹಾಗೂ ಯಾವುದೇ ಅಕ್ರಮ ನಡೆಯದೇ ಇರುವ  ರೀತಿ ತಡೆಯಲು ಡಿ ಬಿ ಟಿ ಮೂಲಕ ಅಂದರೆ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ಅಡಿಯಲ್ಲಿ ಹಣವನ್ನು ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತಂದಿದ್ದು ನಿಮ್ಮ ಆಧಾರ್ ಕಾರ್ಡಿಗೆ ಕಡ್ಡಾಯವಾಗಿ ಬ್ಯಾಂಕ್ ಖಾತೆ ಲಿಂಕ್ ಆಗಿರಬೇಕು ಇದಾಗಲೇ ಪಿಎನ್ ಕಿ ಸಾನ್ ಯೋಜನೆಯ ಅಡಿಯಲ್ಲಿ ಫಲಾನುಭವಿಗಳಾಗಿದ್ದು ನಿಮಗೆ ಹಣವು ನಿಮ್ಮ ಬ್ಯಾಂಕ್ ಖಾತೆಗೆ ತಲುಪುತ್ತಿದ್ದರೆ ನೀವು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಯಾರು ಮೊದಲ ಬಾರಿಗೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುತ್ತಿದ್ದೀರಾ? ಎಲ್ಲರೂ ಕೂಡ ಅರ್ಜಿ ಸಲ್ಲಿಸುವ ಮುನ್ನ ಅಥವಾ ಅರ್ಜಿ ಸಲ್ಲಿಸಿದ ಬಳಿಕ ನಿಮ್ಮ ಆಧಾರ್ ಕಾರ್ಡಿಗೆ ಯಾವ ಬ್ಯಾಂಕ್ ಖಾತೆ ಲಿಂಕ್ ಆಗಿದೆ ಎಂದು ಪರಿಶೀಲಿಸಿಕೊಳ್ಳಬಹುದು ಒಂದು ವೇಳೆ ನಿಮ್ಮ ಬಳಿ ಏನಾದರೂ ಒಂದಕ್ಕಿಂತ ಹೆಚ್ಚಿನ ಬ್ಯಾಂಕ್ ಖಾತೆ ಇದ್ದಲ್ಲಿ ಯಾವುದಾದರೂ ಒಂದು ಬ್ಯಾಂಕ್ ಖಾತೆಗೆ ಮಾತ್ರವಷ್ಟೇ ಡಿ ಬಿ ಟಿ ಅಂದರೆ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ಲಿಂಕ್ ಆಗಲಿದೆ ಅದೇ ಬ್ಯಾಂಕ್ ಖಾತೆಗೆ ಮಾತ್ರವಷ್ಟೇ ಸರ್ಕಾರದ ಯಾವುದೇ ಸವಲತ್ತಿನ ಹಣವು  ನಿಮಗೆ ಬಂದು ಸೇರಲಿದೆ. ಹೆಚ್ಚಿನ ಮಾಹಿತಿಗೆ ಟೆಲಿಗ್ರಾಂ ಸೇರಿclick here to join

ಮೊಬೈಲ್ ನಲ್ಲಿ ಆಧಾರ್ ಕಾರ್ಡ್ ಗೆ ಬ್ಯಾಂಕ್ ಖಾತೆ ಲಿಂಕ್ ಆಗಿದೆಯಾ ಇಲ್ಲವಾ ಎಂದು ಪರಿಶೀಲಿಸಿಕೊಳ್ಳಿ!

ಹೌದು ನಿಮ್ಮ ಬಳಿ ಏನಾದರೂ ಆಧಾರ್ ಕಾರ್ಡ್ ಇದ್ದಲ್ಲಿ ನೀವು ನಿಮ್ಮ ಮೊಬೈಲ್ ಫೋನ್ ನ ಮೂಲಕವೇ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಯನ್ನು ಚೆಕ್ ಮಾಡಿಕೊಳ್ಳಬಹುದು. ಮೊದಲು ನೀವು ಆಧಾರ್ ಕಾರ್ಡಿನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ನೀವು ಆಧಾರ್ ಲಿಂಕ್ ಸ್ಟೇಟಸ್ ನ ಮೇಲೆ ಕ್ಲಿಕ್ ಮಾಡಿದ ಬಳಿಕ ನಿಮಗೆ ಅಲ್ಲಿ ನಿಮ್ಮ ಆಧಾರ್ ನಂಬರನ್ನು ಎಂಟರ್ ಮಾಡಲು ಕೇಳುತ್ತದೆ ಆಧಾರ್ ನಂಬರ್ ಎಂಟರ್ ಮಾಡಿ ಬಳಿಕ ನೀವು ಓಟಿಪಿ ಬಟನ್ ಮೇಲೆ ಕ್ಲಿಕ್ ಮಾಡಿ ಬಳಿಕ ನಿಮ್ಮ ಆಧಾರ್ ಕಾರ್ಡಿಗೆ ರಿಜಿಸ್ಟರ್ ಆಗಿರುವ ಮೊಬೈಲ್ ನಂಬರ್ ಗೆ ಓಟಿಪಿ ಹೋಗುತ್ತದೆ ಒಟಿಪಿ ನಂಬೋದಿಸಿ ಚೆಕ್ ಬ್ಯಾಂಕ್ ಸ್ಟೇಟಸ್ ಎಂದು ಕ್ಲಿಕ್ ಮಾಡಿದ ಬಳಿಕ ನಿಮ್ಮ ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಯ ವಿವರಗಳು ಮತ್ತು ಯಾವ ದಿನಾಂಕದಂದು ಆಧಾರ್ ಕಾರ್ಡ್ ಗೆ ಬ್ಯಾಂಕ್ ಖಾತೆ ಲಿಂಕ್ ಆಗಿದೆ ಎಂದು ತೋರಿಸುತ್ತದೆ. ನೀವು ಅದನ್ನು ಖಚಿತಪಡಿಸಿಕೊಂಡು ತದನಂತರ ಅರ್ಜಿ ಸಲ್ಲಿಸುವುದು ಸೂಕ್ತ ಒಂದು ವೇಳೆ ನೋ ಡೇಟಾ ಫೌಂಡ್ ಎಂದು ಬಂದಲ್ಲಿ ಯಾವುದೇ ಬ್ಯಾಂಕ್ ಖಾತೆಯೊಂದಿಗೂ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿಲ್ಲವೆಂದು ನಿಮಗೆ ಖಚಿತವಾಗುತ್ತದೆ. ಹೆಚ್ಚಿನ ಮಾಹಿತಿಗೆ ಟೆಲಿಗ್ರಾಂ ಸೇರಿclick here to join

ಒಂದು ವೇಳೆ ಯಾವುದೇ ಬ್ಯಾಂಕ್ ಖಾತೆಯೂ ನಿಮ್ಮ ಆಧಾರ್ ನೊಂದಿಗೆ ಲಿಂಕ್ ಆಗಿಲ್ಲವಾದಲ್ಲಿ ನಿಮ್ಮ ಅತ್ತಿರದ ಯಾವುದೇ ಬ್ಯಾಂಕ್ ಶಾಖೆಗೆ ವಿಸಿಟ್ ಮಾಡಿ ನೀವು ಅಲ್ಲಿ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ಅಡಿಯಲ್ಲಿ ನಿಮ್ಮ ಬ್ಯಾಂಕ್ ಖಾತೆಯನ್ನು ಆಧಾರ್ ನೊಂದಿಗೆ ಲಿಂಕ್ ಮಾಡಲು ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಬೇಕು ಅರ್ಜಿ ಬರ್ತಿ ಮಾಡಿ ಸಲ್ಲಿಸಿದ ಬಳಿಕ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ 15 ದಿನದ ಒಳಗಾಗಿ ಲಿಂಕ್ ಆಗಲಿದೆ. 

 ಲೇಖನವನ್ನು ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು ಶುಭದಿನ!

1 thought on “ಗೃಹಲಕ್ಷ್ಮಿ ಯೋಜನೆ : ಮಹಿಳೆಯರು ಪ್ರತಿ ತಿಂಗಳು 2000 ಹಣ ಪಡೆಯಲು ಗೃಹಲಕ್ಷ್ಮಿ ಯೋಜನೆ ಅರ್ಜಿ ಫಾರಂ ಬಿಡುಗಡೆ ಮಾಡಲಾಗಿದೆ ಅರ್ಜಿ ಫಾರಂ ಇಲ್ಲಿದೆ!”

Comments are closed.

error: Content is protected !!