ಜೂನ್ 1ರಿಂದ ಆಧಾರ್ ಕಾರ್ಡ್ ಇದ್ರೆ ಸಾಕು ಎಲ್ಲರಿಗೂ ಉಚಿತ 10KG ಉಚಿತ ಅಕ್ಕಿ ಸಿಗಲಿದೆ ಸಿಎಂ ಸಿದ್ದರಾಮಯ್ಯ ಅಧಿಕೃತ ಘೋಷಣೆ.  ಸಂಪೂರ್ಣ ಮಾಹಿತಿ ಇಲ್ಲಿದೆ!

ರಾಜ್ಯದ ಜನತೆಗೆ ಕಾಂಗ್ರೆಸ್ ಸರ್ಕಾರ ನೀಡಿರುವ ಐದು ಬರವಸೆಗಳನ್ನು ಕೂಡ ಜಾರಿಗೆ ತರುತ್ತಿರುವ ಕಾಂಗ್ರೆಸ್ ಸರ್ಕಾರವು ಇದೀಗ ರಾಜ್ಯದ ಜನತೆಗೆ ಸಿಹಿ ಸುದ್ದಿ ನೀಡಿದೆ.  ಕೇವಲ ಆರೇ ದಿನಕ್ಕೆ 78,000 ಹೊಸ ರೇಷನ್ ಕಾರ್ಡ್ ಅರ್ಜಿಗಳು ಸರ್ಕಾರಕ್ಕೆ ಸಲ್ಲಿಕೆ ಆಗಿದ್ದು  ರಾಜ್ಯದ ಜನರು ಸರ್ಕಾರದಿಂದ ಸಿಗುವ 10 ಕೆಜಿ ಉಚಿತ ಅಕ್ಕಿ ಪಡೆಯಲು ಕಾತುರದಿಂದ ಕಾಯುತ್ತಿದ್ದಾರೆ. 

ಸರ್ಕಾರ ನೀಡಿರುವ ಐದು ಭರವಸೆಗಳು ಕೆಳಗಿನಂತಿವೆ!

  1. ಉಚಿತ ಹತ್ತು ಕೆಜಿ ಅಕ್ಕಿ
  2.  ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ 2000 ಪ್ರತಿ ತಿಂಗಳು ಹಣ
  3.  200 ಯೂನಿಟ್ ನ ಕರೆಂಟು ಉಚಿತ
  4.  ನಿರುದ್ಯೋಗಿಗಳಿಗೆ ಪ್ರತಿ ತಿಂಗಳು 3000 ಹಣ
  5.  ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ

ಈ ಐದು ಭರವಸೆಗಳನ್ನು ನೀಡಿದ್ದು ಈ ಐದು ಭರವಸೆಗಳಿಗೂ ಕೂಡ ತನ್ನದೇ ಆದ ಶರತ್ತುಗಳನ್ನು ಮತ್ತು ನಿಬಂಧನೆಗಳನ್ನು ಇರುವ ಸಾಧ್ಯತೆ ಇದೆ, ಈ ಕುರಿತು ಇದೀಗ ನೂತನ ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದು ಯಾರೆಲ್ಲಾ ಉಚಿತ ಹತ್ತು ಕೆಜಿ ಅಕ್ಕಿ ಪಡೆಯಲು ಬಯಸುತ್ತಿದ್ದಾರೆ ಎಲ್ಲರಿಗೂ ಕೂಡ ಖುಷಿ ಸುದ್ದಿ ನೀಡಿದ್ದಾರೆ.

ರಾಜ್ಯ ಸರ್ಕಾರವು ಸದ್ಯಕ್ಕೆ ಅಕ್ರಮವಾಗಿ ಚಾಲ್ತಿಯಲ್ಲಿರುವ ಹಾಗೂ  ಅರ್ಹವಲ್ಲದ ಅಭ್ಯರ್ಥಿಗಳು ರೇಷನ್ ಕಾರ್ಡ್ ಬಳಸಿ ಉಚಿತ ಸರ್ಕಾರದ ಅಕ್ಕಿ ಪಡೆಯುತ್ತಿದ್ದು ಇಂತಹ ಅನಧಿಕೃತ ಬಿಪಿಎಲ್ ರೇಷನ್ ಕಾರ್ಡನ್ನು ರದ್ದುಗೊಳಿಸಲು ಆದೇಶ ಹೊರಡಿಸಿ ಹೊಸ ಲಿಸ್ಟ್ ಬಿಡುಗಡೆ ಮಾಡಿದೆ ಈ ಹೊಸ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ದಲ್ಲಿ ಮಾತ್ರವಷ್ಟೇ ನಿಮಗೆ ಉಚಿತವಾಗಿ ಅಕ್ಕಿ ಸಿಗಲಿದೆ.

ಈ ಕುರಿತು ನೀವು ಕೂಡ ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ನೇರವಾಗಿ ನಿಮ್ಮ ಜಿಲ್ಲೆ ತಾಲೂಕು ಹೋಬಳಿ ಹಾಗೂ ಊರಿನ ಹೆಸರನ್ನು ನಮೂದಿಸುವ ಮೂಲಕ ನೀವು ನಿಮ್ಮ ಊರಿನ ಸಂಪೂರ್ಣ ರೇಷನ್ ಕಾರ್ಡ್ ಲಿಸ್ಟ್ ಅನ್ನು ಚೆಕ್ ಮಾಡಿಕೊಳ್ಳಬಹುದು.  ಈ ಲಿಸ್ಟ್ ನಲ್ಲಿ ನಿಮ್ಮ ರೇಷನ್ ಕಾರ್ಡಿನ ನಂಬರ್ ಹಾಗೂ ನಿಮ್ಮ ಕುಟುಂಬಸ್ಥರ ಹೆಸರು ಇದ್ದಲ್ಲಿ ಮಾತ್ರ ನೀವು ಉಚಿತವಾಗಿ ಅಕ್ಕಿ ಪಡೆಯಲು ಅರ್ಹರಾಗಿ ಇದ್ದೀರಿ ಎಂದು ತಿಳಿದುಕೊಳ್ಳಬಹುದು.

ಸರ್ಕಾರದ ಉಚಿತ ಭರವಸೆಯ ಹಿನ್ನೆಲೆ 6 ದಿನದಲ್ಲಿ 78,000 ಕ್ಕಿಂತ ಹೆಚ್ಚಿನ ಹೊಸ ರೇಷನ್ ಕಾರ್ಡ್ ಅರ್ಜಿಗಳು ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು ಈ ಕುರಿತು ಸರ್ಕಾರವು ಮುಂದಿನ ಮೂರು ತಿಂಗಳವರೆಗೂ ಕೂಡ ರೇಷನ್ ಕಾರ್ಡ್ ಅರ್ಜಿಗಳನ್ನು ಪರಿಶೀಲಿಸಲು ಮತ್ತು ಅರಧಿಕೃತ ರೇಷನ್ ಕಾರ್ಡ್ ಗಳನ್ನು ರದ್ದುಗೊಳಿಸಲು ಕಾಲಾವಕಾಶ ತೆಗೆದುಕೊಳ್ಳುವ ಕಾರಣ ಅಲ್ಲಿವರೆಗೂ ಮುಂದಿನ ವಾರವೇ ಚಾಲ್ತಿಯಾಗಲಿರುವ ಉಚಿತ 10 ಕೆಜಿ ಅಕ್ಕಿ ವಿತರಣಾ ಯೋಜನೆಯಡಿಯಲ್ಲಿ ಫಲಾನುಭವಿಗಳು ತಮ್ಮ ಆಧಾರ್ ಕಾರ್ಡ್ ಬಳಸಿಕೊಂಡು ಉಚಿತ ರೇಷನ್ ಪಡೆಯಲು ನೂತನ ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.

ಆಧಾರ್ ಕಾರ್ಡ್ ಇದ್ರೆ ಸಾಕು ಉಚಿತ 10 ಕೆಜಿ ಅಕ್ಕಿ ಎಲ್ಲರಿಗೂ!

ನಿಮ್ಮ ಬಳಿ ಆಧಾರ್ ಕಾರ್ಡ್ ಇದೆ ಅಂದ್ರೆ ಸಾಕು ನೀವು ಕೂಡ ಉಚಿತ 10 ಕೆಜಿ ಅಕ್ಕಿ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು 10 ಕೆಜಿ ಅಕ್ಕಿಯನ್ನು ಪಡೆಯಬಹುದು ನೀವೇನಾದರೂ ಈಗಾಗಲೇ ರೇಷನ್ ಕಾರ್ಡ್ ಗೆ ಅರ್ಜಿ  ಸಲ್ಲಿಸಿದ್ದಲ್ಲಿ ಮುಂದಿನ ಮೂರು ತಿಂಗಳವರೆಗೂ ಕೂಡ ನಿಮ್ಮ ಆಧಾರ್ ಕಾರ್ಡ್ ಬಳಸಿಕೊಂಡುಯೇ ನೀವು ಉಚಿತ ರೇಶನ್ ಪಡೆಯಬಹುದಾಗಿದೆ.

ಇದು ಕೇವಲ ಮುಂದಿನ ಎರಡರಿಂದ ಮೂರು ತಿಂಗಳವರೆಗೂ ಕೂಡ ಚಾಲ್ತಿಯಲ್ಲಿದ್ದು ಮುಂದಿನ ಆದೇಶದವರೆಗೂ ಕೂಡ ಮಾತ್ರವಷ್ಟೇ ಅಭ್ಯರ್ಥಿಗಳು ಉಚಿತರೇಶನ್ ಪಡೆದುಕೊಳ್ಳಬಹುದು ಮುಂದಿನ ಆದೇಶ ಆದ ಬಳಿಕ ಅಭ್ಯರ್ಥಿಗಳು ತಮ್ಮ ರೇಷನ್ ಕಾರ್ಡ್ ಅಪ್ರುವಲ್ ಸ್ಟೇಟಸ್ ಅನ್ನು ಚೆಕ್ ಮಾಡಿಕೊಂಡು ರೇಷನ್ ಕಾರ್ಡ್ ಪಡೆದುಕೊಂಡು ಬಳಿಕ ಉಚಿತ ರೇಶನನ್ನು ಪಡೆಯಲು ಸಾಧ್ಯವಾಗುತ್ತದೆ.

ಯೋಜನೆಯ ಮುಖ್ಯ ಉದ್ದೇಶ ಬಹಳಷ್ಟು ಜನ ಅರ್ಹ ಅಭ್ಯರ್ಥಿಗಳು ಅರ್ಹತೆ ಇದ್ದರೂ ಕೂಡ ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿ, ಅರ್ಜಿ ಅಪ್ರುವಲ್ ಆಗದೆ ಅಭ್ಯರ್ಥಿಗಳು ಉಚಿತ ರೇಷನ್  ಪಡೆಯುವಲ್ಲಿ ವಂಚಿತರಾಗುತ್ತಾರೆ ಎಂಬ ಕಾರಣ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದ್ದು ಎಲ್ಲ ಬಡವರು ಕೂಡ ಈ ಯೋಜನೆಯ ಅಡಿಯಲ್ಲಿ ಬಿಪಿಎಲ್ ರೇಷನ್ ಕಾರ್ಡ್ ಇಲ್ಲದೇ ಹೋದರು ಕೂಡ ತಮ್ಮ ಆಧಾರ್ ಕಾರ್ಡ್ ಬಳಸಿಕೊಂಡು ಉಚಿತ ಹತ್ತು ಕೆಜಿ ಅಕ್ಕಿಯನ್ನು ಪಡೆಯಬಹುದಾಗಿದೆ ಈ ಕುರಿತು ಮುಂದಿನ ಕೆಲ ದಿನಗಳಲ್ಲಿ ನೂತನ ಸಿಎಂ ಸಿದ್ದರಾಮಯ್ಯ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಿದ್ದು ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೆ ಹೊಸ ಮಾರ್ಗಸೂಚಿ ಅಥವಾ ನೋಟಿಸ್ ನೀಡಲಿದ್ದಾರೆ.

ಲೇಖನವನ್ನು ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು ಶುಭದಿನ!

error: Content is protected !!