2nd PUC ಮರು ಮೌಲ್ಯಮಾಪನ ಮತ್ತು ಮರು ಎಣಿಕೆಗಾಗಿ ಮೇ 3ನೇ ದಿನಾಂಕದಿಂದ ಅರ್ಜಿ ಆರಂಭ. ಇಲ್ಲಿದೆ ಸಂಪೂರ್ಣ ಮಾಹಿತಿ.?

ದ್ವಿತೀಯ ಪಿಯುಸಿ ಮರು ಮೌಲ್ಯ ಮಾಪನ ಮತ್ತು ಮರು  ಎಣಿಕೆಗಾಗಿ ಮೇ 3 ನೇ ದಿನಾಂಕ ದಿಂದ ಅರ್ಜಿ ಆರಂಭ. ಇಲ್ಲಿದೆ ಸಂಪೂರ್ಣ ಮಾಹಿತಿ.!

  ಕರ್ನಾಟಕ ರಾಜ್ಯದ 2023 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯು ಮಾರ್ಚ್ 9ನೇ ದಿನಾಂಕ ದಲ್ಲಿ ಶುರುವಾಗಿ ಮಾರ್ಚ್ 29ನೇ ದಿನಾಂಕದಲ್ಲಿ ಮುಗಿದಿದೆ. ಇದರ  ಬೆನ್ನಲ್ಲೇ SSLC  ಪರೀಕ್ಷೆ ಶುರುವಾದ ಕಾರಣ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆದಷ್ಟು ಶೀಘ್ರದಲ್ಲಿ ಫಲಿತಾಂಶ ವನ್ನು ಬಿಡುಗಡೆ ಮಾಡುವ ಸಲುವಾಗಿ ಶಿಕ್ಷಣ ಇಲಾಖೆಯು ಖಾಸಗಿ ಕ್ಷೇತ್ರ ದಿಂದ ಶಿಕ್ಷಕರನ್ನು ನೇಮಕ ಮಾಡಿ ಕೊಂಡು ದ್ವಿತೀಯ ಪಿಯುಸಿ ಪರೀಕ್ಷೆಯ ಪೇಪರ್ ಗಳನ್ನು ಮೌಲ್ಯ ಮಾಪನ ಮಾಡಿ ಏಪ್ರಿಲ್ ತಿಂಗಳ 21 ನೇ ದಿನಾಂಕ ದಂದು ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ ಸುಮಾರು 90 ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದು ಕೆಲವೊಂದಿಷ್ಟು ವಿದ್ಯಾರ್ಥಿಗಳು ಫೇಲ್ ಕೂಡ ಆಗಿದ್ದಾರೆ ಅಂತಹ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯಿಂದ ಎಪ್ರಿಲ್ 21ನೇ ದಿನಾಂಕ ದಿಂದಲೇ ಉತ್ತರ ಪತ್ರಿಕೆಗಳ ಸ್ಕ್ಯಾನ್ಡ್ ಪ್ರತಿಗಳನ್ನು  ಪಡೆಯಲು ದಿನಾಂಕ 27 ಏಪ್ರಿಲ್ ವರೆಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗಿತ್ತು. ಇದರಿಂದ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಸ್ ಆಗುವ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರೆ ಅವರು ಎಷ್ಟು ಅಂಕದ  ಪ್ರಶ್ನೆಗಳಿಗೆ ಉತ್ತರವನ್ನು ಬರೆದಿದ್ದಾರೆ ಮತ್ತು ಆ ಪ್ರಶ್ನೆಗಳಿಗೆ ಎಷ್ಟು ಅಂಕವನ್ನು ಮೌಲ್ಯ ಮಾಪನದಲ್ಲಿ ನೀಡಲಾಗಿದೆ ಎಂದು ತಿಳಿದುಕೊಳ್ಳಲು, ಇದೀಗ ಶಿಕ್ಷಣ ಇಲಾಖೆಯಿಂದ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಉತ್ತರ ಪತ್ರಿಕೆಗಳ ಸ್ಕ್ಯಾನ್ಡ್ ಪ್ರತಿಗಳನ್ನು ನೀಡಿದ್ದು. ಉತ್ತರ ಪತ್ರಿಕೆಗಳನ್ನು ಪರೀಕ್ಷಿಸಿ ಅದರಲ್ಲಿ ಯಾವುದಾದರೂ ಮೌಲ್ಯಮಾಪನದಲ್ಲಿ ಪ್ರಶ್ನೆಗೆ ಉತ್ತರ ಸರಿಯಾಗಿದ್ದರೂ  ತಪ್ಪು ಎಂದು ಅಂಕ ನೀಡಿಲ್ಲದಿದ್ದರೆ ಮತ್ತು ನೀಡಿರುವ  ಅಂಕವನ್ನು ಒಟ್ಟು ಮಾಡಿಲ್ಲದಿದ್ದರೆ ಅಂತಹ ವಿದ್ಯಾರ್ಥಿಗಳು ಮರು ಮೌಲ್ಯಮಾಪನ ಮತ್ತು ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಶಿಕ್ಷಣ ಇಲಾಖೆ ಯಿಂದ ತಿಳಿಸಲಾಗಿದೆ. ಅಲ್ಲದೆ ಶಿಕ್ಷಣ ಇಲಾಖೆಯಿಂದ ಮರು ಮೌಲ್ಯ ಮಾಪನ ಮತ್ತು ಮರು ಎಣಿಕೆಗೆ  ಕೆಲವು ನಿಯಮಗಳನ್ನು ಅನುಸರಿಸಲು ತಿಳಿಸಿದ್ದು ಈ ನಿಯಮಗಳನ್ನು ವಿದ್ಯಾರ್ಥಿಗಳು ಕಡ್ಡಾಯವಾಗಿ ಅನುಸರಿಸ ಬೇಕು ಎಂದು ತಿಳಿಸಿದೆ.

 ದ್ವಿತೀಯ ಪಿಯುಸಿ ಮರು ಮೌಲ್ಯಮಾಪನ ಮತ್ತು ಮರು ಎಣಿಕೆಗೆ ಅರ್ಜಿ ಆರಂಭ.?

 2023 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಎಪ್ರಿಲ್ 21 ನೇ ದಿನಾಂಕ ದಂದು ಬಿಡುಗಡೆಯಾಗಿದ್ದು. ಇದರಲ್ಲಿ ಕೆಲವು  ಫೇಲ್ ಆಗಿರುವಂತಹ ವಿದ್ಯಾರ್ಥಿಗಳಿಗೆ ಅವರ  ಸ್ಕ್ಯಾನ್ಡ್ ಉತ್ತರ ಪತ್ರಿಕೆಗಳನ್ನು ಪಡೆಯಲು ಅರ್ಜಿ ಸಲ್ಲಿಸಲು ದಿನಾಂಕವನ್ನು ಶಿಕ್ಷಣ ಇಲಾಖೆಯಿಂದ ತಿಳಿಸಲಾಗಿತ್ತು. ಇದೀಗ 28 ಏಪ್ರಿಲ್ ನಿಂದ ಅರ್ಜಿ ಸಲ್ಲಿಸಿದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಉತ್ತರ ಪತ್ರಿಕೆಗಳನ್ನು ಅಂದರೆ ಪರೀಕ್ಷೆಯಲ್ಲಿ ಬರೆದಿರುವ ಉತ್ತರ ಪತ್ರಿಕೆಯ ಸ್ಕ್ಯಾನ್ಡ್  ಉತ್ತರ ಪ್ರತಿಯನ್ನು ಬಿಡುಗಡೆ ಮಾಡಿದ್ದು. ವಿದ್ಯಾರ್ಥಿಗಳು ಆ ಪತ್ರಿಕೆಯನ್ನು ಪರೀಕ್ಷಿಸಿ ಆ ಪತ್ರಿಕೆಯಲ್ಲಿ ಮೌಲ್ಯ ಮಾಪನದಲ್ಲಿ ವ್ಯತ್ಯಾಸಗಳಾಗಿದ್ದರೆ. ಅಂದರೆ ಪ್ರಶ್ನೆಗೆ ಉತ್ತರ ಬರೆದಿದ್ದರು ತಪ್ಪು ಎಂದು ಅಂಕ ನೀಡಿರದಿದ್ದರೆ ಅಥವಾ  ಉತ್ತರಕ್ಕೆ ಅಂಕ ನೀಡಿದ್ದು ಅಂಕಗಳನ್ನು ಒಟ್ಟು ಮಾಡುವ ಸಮಯದಲ್ಲಿ ಸರಿಯಾಗಿ ಒಟ್ಟು ಮಾಡದೆ ಅಂಕವನ್ನು ಕಡಿಮೆ ನೀಡಿದ್ದರೆ ಅಂತಹ ವಿದ್ಯಾರ್ಥಿಗಳು ಅವರ ಉತ್ತರ ಪತ್ರಿಕೆಯ ಮೇಲೆ ಮರು ಮೌಲ್ಯಮಾಪನ ಅಥವಾ ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಇಲಾಖೆ ಯಿಂದ ದಿನಾಂಕವನ್ನು ನಿಗದಿ ಮಾಡಿದೆ. ಅರ್ಜಿ ಸಲ್ಲಿಸಲು 3-5-2023 ರಿಂದ 8-5-2023 ರ ವರೆಗೆ ವಿದ್ಯಾರ್ಥಿಗಳಿಗೆ ಕಾಲಾವಕಾಶವನ್ನು ನೀಡಿದ್ದು ಇದರ ಒಳಗಾಗಿ ಅವರ  ಉತ್ತರ ಪತ್ರಿಕೆಗಳನ್ನು ಪರೀಕ್ಷಿಸಿ  ಮರು ಮೌಲ್ಯಮಾಪನ ಮತ್ತು ಮರು ಎಣಿಕೆಗೆ  ಅರ್ಜಿ ಸಲ್ಲಿಸಬೇಕು ಎಂದು ಶಿಕ್ಷಣ ಇಲಾಖೆಯಿಂದ ತಿಳಿಸಲಾಗಿದೆ. ಆದರೆ ಈ ಮರು ಮೌಲ್ಯಮಾಪನ ಮತ್ತು ಮರು ಎಣಿಕೆಗೂ ಸಹ ಇಲಾಖೆ ಯಿಂದ ಶುಲ್ಕವನ್ನು ನಿಗದಿಪಡಿಸಿದ್ದು ಶುಲ್ಕವನ್ನು ಪಾವತಿಸಿ ಮರು ಮೌಲ್ಯಮಾಪನ ಮಾಡಿಸಬೇಕಾಗಿದೆ.

ಹೆಚ್ಚಿನ ಮಾಹಿತಿಗೆ ನಮ್ಮ ಟೆಲಿಗ್ರಾಂ ಜಾಯಿನ್ ಆಗಿ ಪ್ರತಿದಿನ ಮಾಹಿತಿ ಪಡೆಯಿರಿ: Click here to join telegram

 ಮರು ಮೌಲ್ಯ ಮಾಪನ ಮತ್ತು ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಅನುಸರಿಸಬೇಕಾದ ಕ್ರಮಗಳು.!

ದ್ವಿತೀಯ ಪಿಯುಸಿ ಪರೀಕ್ಷೆಯ ಮರು ಮೌಲ್ಯಮಾಪನ ಮತ್ತು ಮರು ಎಣಿಕೆಗೆ  ಅರ್ಜಿ ಸಲ್ಲಿಸಲು ಕೆಲವು ನಿಯಮಗಳನ್ನು ಅನುಸರಿಸ ಬೇಕಾಗಿದೆ ಶಿಕ್ಷಣ ಇಲಾಖೆ ಯಿಂದ ವಿದ್ಯಾರ್ಥಿಗಳಿಗೆ ಕೆಲವು ಕ್ರಮಗಳನ್ನು ತಿಳಿಸಿದ್ದು  ಈ ಕ್ರಮಗಳ ಅನುಸಾರವಾಗಿ ಮರು ಮೌಲ್ಯ ಮಾಪನ ಮತ್ತು ಮರು ಎಣಿಕೆಗೆ ಅರ್ಜಿ ಸಲ್ಲಿಸಬೇಕು. 

ಮರು ಮೌಲ್ಯ ಮಾಪನಕ್ಕೆ ಅನುಸರಿಸಬೇಕಾದ ಕ್ರಮಗಳು..

  1. ಮೌಲ್ಯ ಮಾಪನ ಗೊಂಡ ಉತ್ತರ ಪತ್ರಿಕೆಗಳ ಸ್ಕ್ಯಾನ್ಡ್  ಪ್ರತಿಗಳನ್ನು ಪರಿಶೀಲಿಸಿದ ನಂತರ ಉತ್ತರ ಪತ್ರಿಕೆಯಲ್ಲಿ ಯಾವುದಾದರು ವ್ಯತ್ಯಾಸ ಕಂಡು ಬಂದರೆ ಮಾತ್ರ ಮರು ಮೌಲ್ಯ ಮಾಪನಕ್ಕೆ ಅರ್ಜಿ ಸಲ್ಲಿಸಬೇಕು.
  2. ಮರು ಮೌಲ್ಯ ಮಾಪನಕ್ಕೆ ಅರ್ಜಿ ಸಲ್ಲಿಸಲು ವಿಷಯಕ್ಕೆ 1670 ಶುಲ್ಕ ಪಾವತಿಸಬೇಕಾಗಿದೆ.
  3. ಮರು ಮೌಲ್ಯ ಮಾಪನಕ್ಕೆ ಅರ್ಜಿ ಸಲ್ಲಿಸಲು 8-5-2018 ಕೊನೆಯ ದಿನವಾಗಿದೆ. 

ಮರು ಎಣಿಕೆಗೆ ಅನುಸರಿಸಬೇಕಾದ  ಕ್ರಮಗಳು..

  1.  ಮರು ಮೌಲ್ಯ ಮಾಪನಕ್ಕೆ ಅರ್ಜಿ ಸಲ್ಲಿಸುವವರು ಮರು ಹೇಳಿಕೆಗೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲ.
  2.  ಮೌಲ್ಯ ಮಾಪನ ಸರಿಯಾಗಿದ್ದು   ಹೇಳಿಕೆ ತಪ್ಪಾಗಿದ್ದರೆ ಮರು ಹೇಳಿಕೆಗೆ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.
  3.   ಮೌಲ್ಯ ಮಾಪನ ಗೊಂಡ ಉತ್ತರ ಪತ್ರಿಕೆಗಳ ಸ್ಟ್ಯಾಂಡ್ ಪ್ರತಿಗಳನ್ನು ಪರಿಶೀಲಿಸಿದ ನಂತರ ಅಂಕಗಳ ಎಣಿಕೆಯಲ್ಲಿ ಅಥವಾ ಕೊಟ್ಟಿರುವ ಹಂತದಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ ಮಾತ್ರ ಮರು ಎಣಿಕೆಗೆ ಅರ್ಜಿ ಸಲ್ಲಿಸಬೇಕು
  4.  ಕೇವಲ ಮರು ಎಣಿಕೆಗೆ ಅರ್ಜಿ ಸಲ್ಲಿಸಲು 8-5-2023 ಕೊನೆಯ ದಿನವಾಗಿದೆ ಆದರೆ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಇರುವುದಿಲ್ಲ.ಹೆಚ್ಚಿನ ಮಾಹಿತಿಗೆ ನಮ್ಮ ಟೆಲಿಗ್ರಾಂ ಜಾಯಿನ್ ಆಗಿ ಪ್ರತಿದಿನ ಮಾಹಿತಿ ಪಡೆಯಿರಿ: Click here to join telegram

     

error: Content is protected !!