ರಾಜ್ಯ ಸರ್ಕಾರದ  ಜಾರಿ ಮಾಡಲಿರುವ 5 ಗ್ಯಾರಂಟಿಗಳಲ್ಲಿ ಯಾವುದೇ ಗ್ಯಾರಂಟಿಯ ಉಪಯೋಗ ಪಡೆಯಲು ಈ ಒಂದು ದಾಖಲೆ ಕಡ್ಡಾಯ.?

ರಾಜ್ಯ ಸರ್ಕಾರದ  ಜಾರಿ ಮಾಡಲಿರುವ 5 ಗ್ಯಾರಂಟಿಗಳಲ್ಲಿ ಯಾವುದೇ ಗ್ಯಾರಂಟಿಯ ಉಪಯೋಗ ಪಡೆಯಲು ಈ ಒಂದು ದಾಖಲೆ ಕಡ್ಡಾಯ.

ಕರ್ನಾಟಕ ರಾಜ್ಯದ ಹೊಸ ಸರ್ಕಾರವು  ಐದು ಹೊಸ ಯೋಜನೆಗಳನ್ನು ಜಾರಿ ಮಾಡಲು ಮುಂದಾಗಿದ್ದು ಇದಾಗಲೇ ಸರ್ಕಾರ ಕೆಲವು ನಿಯಮಗಳನ್ನು ಈ  ಯೋಜನೆಗಳ ಉಪಯೋಗ ಪಡೆಯಲು ತಿಳಿಸಿದ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿ ಮತ್ತು ಜೆಡಿಎಸ್ ಪಕ್ಷವನ್ನು ಸೋಲಿಸಿ ಅತಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವ ಸಲುವಾಗಿ ಚುನಾವಣೆಯ ಸಮಯದಲ್ಲಿ ರಾಜ್ಯದ ಜನರಿಗೆ ಕೆಲವು ಗ್ಯಾರಂಟಿಗಳನ್ನು ನೀಡಲಾಗಿತ್ತು. ಅದೇ ರೀತಿ ಈ ಬಾರಿ ರಾಜ್ಯದಲ್ಲಿ ಅತಿ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವು ಗೆದ್ದು ಮುಂದಿನ ಐದು ವರ್ಷದ ಸರ್ಕಾರವನ್ನು ತನ್ನದಾಗಿಸಿಕೊಂಡಿತು ಇದೀಗ ನೀಡಿರುವ ಭರವಸೆಗಳಲ್ಲಿ ಐದು ಭರವಸೆಗಳನ್ನು ಮುಂದಿನ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಜಾರಿ ಮಾಡುವುದಾಗಿ ತಿಳಿಸಿದ್ದು. ಇದಕ್ಕೆ ಕೆಲವು ನಿಯಮಗಳಿವೆ ಮತ್ತು ಕೆಲವು ದಾಖಲೆಗಳು ಕಡ್ಡಾಯವಾಗಿರುತ್ತದೆ ಎಂದು ಹೊಸ ಸರ್ಕಾರದಿಂದ ಆದೇಶ ಮಾಡಲಾಗಿದೆ.

ಐದು ಗ್ಯಾರಂಟಿಗಳಲ್ಲಿ ಯಾವುದೇ ಗ್ಯಾರಂಟಿಯ ಉಪಯೋಗ ಪಡೆಯಲು ಈ ಒಂದು ದಾಖಲೆ ಕಡ್ಡಾಯ.

 ಸದ್ಯ ಈಗಾಗಲೇ ರಾಜ್ಯದ ಹೊಸ ಸರ್ಕಾರದ  ಮುಖ್ಯಮಂತ್ರಿಗಳಾದಂತಹ ಸಿದ್ದರಾಮಯ್ಯನವರು ಈ ಐದು ಗ್ಯಾರಂಟಿಗಳನ್ನು ಈಡೇರಿಸುವುದಾಗಿ ಆದೇಶ ಮಾಡಿದ್ದು ಇದನ್ನು ಮಾಧ್ಯಮಗಳ ಮುಂದೆ ಮುಂದಿನ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಇದರ ಬಗ್ಗೆ ಕೆಲವು ಚರ್ಚೆಗಳನ್ನು ಎಲ್ಲಾ ಸದಸ್ಯರ ನಡುವೆ ಚರ್ಚಿಸಿ ಈ ಗ್ಯಾರಂಟಿಗಳನ್ನು ಜಾರಿ ಮಾಡಲಾಗುತ್ತದೆ ಎಂದು ಆದೇಶವನ್ನು ಮಾಡಿದ್ದರು ಆದರೆ ಈಗಾಗಲೇ ಕ್ಯಾಬಿನೆಟ್ ಮೀಟಿಂಗ್ ಮುಗಿದ ನಂತರವೂ ಈ ಬಗ್ಗೆ ಯಾವುದೇ ಮಾಹಿತಿಯನ್ನು ನೀಡದ ಮುಖ್ಯಮಂತ್ರಿಗಳು ಇದೀಗ ಕೆಲವು ಸದಸ್ಯರಿಂದ ಮತ್ತು ಕಾಂಗ್ರೆಸ್ ಮುಖಂಡರುಗಳಿಂದ ಕೆಲವು  ಮಾಹಿತಿಗಳು ಹೊರಬಂದಿವೆ. ಇದರ ಪ್ರಕಾರ ಸರ್ಕಾರ ನೀಡಲಿರುವ 5 ಗ್ಯಾರಂಟಿಗಳನ್ನು ಪಡೆಯಲು ಮುಖ್ಯವಾಗಿ ಬಿಪಿಎಲ್ ಕಾರ್ಡ್ ಹೊಂದಿರಲೇಬೇಕು ಅಂದರೆ ಯಾವುದೇ ಗ್ಯಾರೆಂಟಿಯ ಉಪಯೋಗ ಪಡೆಯಬೇಕು ಎಂದರು ಬಿಪಿಎಲ್ ಕಾರ್ಡ್ ಮುಖ್ಯ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಮಾತ್ರ  ಈ ಐದು ಗ್ಯಾರಂಟಿಗಳ ಪ್ರಯೋಜನ ಪಡೆಯಲು ಸಾಧ್ಯ ಎಂದು ತಿಳಿಸಲಾಗಿದೆ ಇದರ ಜೊತೆಗೆ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಕೂಡ ಬಹಳ ಮುಖ್ಯವಾದ ದಾಖಲೆಗಳು ಎಂದು ಸರ್ಕಾರದಿಂದ ತಿಳಿಸಲಾಗಿದೆ.

ಅದೇ ರೀತಿ ಈಗಾಗಲೇ ಸರ್ಕಾರ ನೀಡಿರುವ ಐದು ಬರವಸೆಗಳಿಗೂ ಅಂದರೆ ಮೊದಲನೇದಾಗಿ ಪ್ರತಿ ಮನೆಗೆ ಇನ್ನೂರು ಯೂನಿಟ್ ವಿದ್ಯುತ್ ಉಚಿತ,  ಮಹಿಳೆಯರಿಗೆ ಪ್ರತಿ ತಿಂಗಳು 2000 ಉಚಿತ,  ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ,  ಪದವಿ ಮತ್ತು ಡಿಪ್ಲೋಮೋ ಹೊಂದಿರುವ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 3000 ಮತ್ತು 1500 ರೂಪಾಯಿ ಉಚಿತ, ಈ ರೀತಿಯ ಎಲ್ಲ ಯೋಜನೆಗಳಿಗೂ ಬಿಪಿಎಲ್ ಕಾರ್ಡ್ ಕಡ್ಡಾಯವಾಗಿರುತ್ತದೆ ಈ ಐದು ಯೋಜನೆಗಳನ್ನು ಕೇವಲ ಬಿಪಿಎಲ್ ಕಾರ್ಡ್ ಹೊಂದಿರುವಂತಹ ಅಭ್ಯರ್ಥಿಗಳು ಮಾತ್ರ ಪಡೆದುಕೊಳ್ಳಬಹುದು ಎಂದು ತಿಳಿಸಲಾಗಿದ್ದು ಈಗಾಗಲೇ ಬಿಪಿಎಲ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡುವುದು ಕಡ್ಡಾಯ ಇಲ್ಲದಿದ್ದರೆ ನಿಮ್ಮ ಬಿಪಿಎಲ್ ಕಾರ್ಡನ್ನು ರದ್ದು ಮಾಡಲಾಗುತ್ತದೆ ಎಂದು ಸರ್ಕಾರದಿಂದ ಆದೇಶವನ್ನು ಹೊರಡಿಸಿದ್ದು ಇನ್ನೂ ಕೆಲವು ದಿನಗಳಲ್ಲಿ ಸರ್ಕಾರ ನೀಡಿರುವ ಐದು ಗ್ಯಾರಂಟಿಗಳನ್ನು ಜಾರಿ ಮಾಡಲು ನಿರ್ಧಾರ ಮಾಡಲಾಗಿದೆ ಆದರೆ ಈಗಾಗಲೇ ತಿಳಿಸಿದ ಹಾಗೆ ಈ ದಾಖಲೆಗಳು ಮತ್ತು ನಿಯಮಗಳು ಕಡ್ಡಾಯವಾಗಿರುತ್ತದೆ. ಅಲ್ಲದೆ ಈಗಾಗಲೇ ವಿರೋಧ ಪಕ್ಷಗಳಿಂದ ಕೆಲವು ಮಾತುಗಳು ಕೇಳಿ ಬಂದಿದ್ದು ಕಾಂಗ್ರೆಸ್ ಪಕ್ಷವು ಸರ್ಕಾರದ ರಚನೆಗೂ ಮೊದಲೇ ಅಥವಾ ಒಂದು ವಾರದ ಒಳಗಾಗಿ ಐದು ಭರವಸೆಗಳನ್ನು ಈಡೇರಿಸುವುದಾಗಿ ತಿಳಿಸಿದ್ದು. ಈವರೆಗೂ ಇದರ ಬಗ್ಗೆ  ಯಾವುದೇ ಜಾರಿಯನ್ನು ಮಾಡಿರುವುದಿಲ್ಲ ಕೇವಲ ಮಾತಿನಲ್ಲಿ ಹೇಳುತ್ತಿದ್ದಾರೆ ಎಂದು ಕೆಲವು ಟೀಕೆಗಳನ್ನು ಮಾಡಲು ಆರಂಭಿಸಲಾಗಿದೆ ಆದ್ದರಿಂದ ರಾಜ್ಯದ ಜನರು ಜೂನ್ 1 ನೇ ದಿನಾಂಕದವರೆಗೂ ಕಾದು ನೋಡಬೇಕಾಗಿದೆ.

error: Content is protected !!