ಉಚಿತ 200 ಯೂನಿಟ್ ವಿದ್ಯುತ್ ಪಡೆಯಲು ಇಲ್ಲಿದೆ ಹೊಸ ಕಂಡೀಷನ್ಸ್! ಯಾರ್ಯಾರಿಗೆ ಸಿಗಲಿದೆ ಉಚಿತ ಕರೆಂಟ್ ಇಲ್ಲಿದೆ ಅಧಿಕೃತ ಮಾಹಿತಿ!

ಸದ್ಯ ಈಗಷ್ಟೇ ಕ್ಯಾಬಿನೆಟ್ ಮೀಟಿಂಗ್ ಮುಗಿಸಿ ರಾಜ್ಯದ ನೂತನ ಸಿಎಂ ಸಿದ್ದರಾಮಯ್ಯ ಮಾಧ್ಯಮಗಳಿಗೆ ಸುದ್ದಿಗೋಷ್ಠಿ ನೀಡಿದ್ದು ಈ ನಡುವೆ ತಾವು ನೀಡಿದ್ದ ಐದು ಭರವಸೆಗಳನ್ನು ಕೂಡ ರಾಜ್ಯದ ಜನತೆಗೆ ನೀಡಲು ಮುಂದಾಗಿದ್ದು  ಎಲ್ಲಾ ಭರವಸೆಗಳ ಮೇಲು ಕೂಡ ರಾಜ್ಯ ಸರ್ಕಾರವು ಹೊಸ ಶರತುಗಳನ್ನು ಹೇರಲಿದೆ ಈ ನಡುವೆ ಉಚಿತ ಕರೆಂಟನ್ನು ಸರ್ಕಾರವು ಅಧಿಕೃತವಾಗಿ ಘೋಷಣೆ ಮಾಡಿದ್ದು ನೀವು ಉಚಿತ 200 ಯೂನಿಟ್ ಕರೆಂಟ್  ಪಡೆಯುವುದು ಹೇಗೆ ಎಂದು ಈ ಲೇಖನದಲ್ಲಿ ತಿಳಿಸಲಿದ್ದೇವೆ.

ಎಲ್ಲರಿಗೂ ಸಿಗಲಿದೆ ಉಚಿತ ಇನ್ನೂರು ಯೂನಿಟ್ ಕರೆಂಟ್!

ನೂತನ ಸಿಎಂ ಸಿದ್ದರಾಮಯ್ಯ ಇದೀಗ ಮಾಹಿತಿ ನೀಡಿದ್ದು ಜುಲೈ 1 ನೇ ತಾರೀಖಿನಿಂದ ಉಚಿತ ಇನ್ನೂರು ಯೂನಿಟ್ ಕರೆಂಟನ್ನು ಜಾರಿಗೆ ತರಲು ಸರ್ಕಾರ ಆದೇಶಿಸಿದೆ. ಜೂನ್  ತಿಂಗಳಿನಿಂದ ಯಾವುದೇ 200 ಯೂನಿಟ್ ಕರೆಂಟನ್ನು ನೀಡಲಾಗುತ್ತಿಲ್ಲ ಹಾಗೂ ಯಾವುದೇ ಜಾತಿ ಭೇದ ಇಲ್ಲದೆ ಎಲ್ಲರಿಗೂ ಕೂಡ ಉಚಿತ ಕರೆಂಟನ್ನು ಸರ್ಕಾರವು ನೀಡಲು ಮುಂದಾಗಿದ್ದು, ನೀವು ಪ್ರತಿ ತಿಂಗಳು ಒಳಗೆ ವಿದ್ಯುತ್ ಬಳಕೆ ಮಾಡಿದ್ದಲ್ಲಿ ನೀವು ಯಾವುದೇ ವಿದ್ಯುತ್ ಬಿಲ್ಲನ್ನು ಕಟ್ಟುವ ಹಾಗಿಲ್ಲ ಹಾಗೂ ನೀವೇನಾದರೂ ಒಂದು ವೇಳೆ 200 ಯೂನಿಟ್ಗಿಂತ ಹೆಚ್ಚಿನ ವಿದ್ಯುತ್ತನ್ನು ಬಳಕೆ ಮಾಡಿದ್ದಲ್ಲಿ ನೀವು ಸಂಪೂರ್ಣ ವಿದ್ಯುತ್ ಬಿಲ್ಲನ್ನು ಪಾವತಿ ಮಾಡಬೇಕಾಗುತ್ತದೆ.

ಒಂದು ವರ್ಷದ ಸಂಪೂರ್ಣ ವಿದ್ಯುತ್ ಬಿಲ್ ತೆಗೆದುಕೊಳ್ಳಲಾಗುತ್ತದೆ!

ಹೌದು ನೂತನ ಸಿಎಂ ಸಿದ್ದರಾಮಯ್ಯ ತಿಳಿಸಿದ ಹಾಗೆ ನೀವು ಪ್ರತಿ ತಿಂಗಳು ಬಳಸುವ ಸಂಪೂರ್ಣ ವಿದ್ಯುತ್ ಬಿಲ್ಗೆ ಯಾವುದೇ ಹಣವನ್ನು ಪಾವತಿ ಮಾಡುವ ಅವಶ್ಯಕತೆ ಇಲ್ಲ. ಹಾಗೂ ನೀವು ಬಳಸಿದ ಸಂಪೂರ್ಣ ವಿದ್ಯುತ್ ಬಿಲ್ಲ ಅನುಸಾರವಾಗಿ ಒಂದು ವರ್ಷದ ವಿದ್ಯುತ್ ಬಿಲ್ಲನ್ನು ಪರಿಗಣಿಸಿ ಮತ್ತೆ 10% ವಿದ್ಯುತ್ ಉಚಿತವಾಗಿ ನೀಡಲಾಗುತ್ತದೆ, ಇದು ಕೇವಲ ನೀವೇನಾದರೂ ಕಡಿಮೆ ವಿದ್ಯುತ್ತನ್ನು ಬಳಸಿದ್ದಲ್ಲಿ ಮಾತ್ರವಷ್ಟೇ ಒಂದು ವರ್ಷದ ಸಂಪೂರ್ಣ ಬಿಲ್ಲನ್ನು ಪರಿಗಣಿಸಿ ತದನಂತರ 10% ವಿದ್ಯುತ್ ನಿಮಗೆ ಉಚಿತವಾಗಿ ಸಿಗಲಿದೆ, ನೀವೇನಾದರೂ ಒಂದು ವೇಳೆ 200 ಯೂನಿಟ್ ಕರೆಂಟನ್ನು ಸಂಪೂರ್ಣವಾಗಿ ಪ್ರತಿ ತಿಂಗಳು ಕೂಡ ಬಳಸಿಕೊಂಡಲ್ಲಿ ನಿಮಗೆ  12 ತಿಂಗಳ ನಂತರ ಯಾವುದೇ 10% ಹೆಚ್ಚುವರಿ ವಿದ್ಯುತ್ ನೀಡಲಾಗುವುದಿಲ್ಲ.

ಎಲ್ಲರಿಗೂ ಸಂಪೂರ್ಣ ಉಚಿತ ಕರೆಂಟ್!

ಉಚಿತ 200 ಯೂನಿಟ್ ಕರೆಂಟ್ ಯೋಜನೆಯಡಿಯಲ್ಲಿ ಯಾವುದೇ ಬಿಪಿಎಲ್ ಹಾಗೂ ಎಪಿಎಲ್ ರೇಷನ್ ಕಾರ್ಡ್ ಶರತಗಳನ್ನು ವಿಧಿಸಿಲ್ಲ ಸಂಪೂರ್ಣ ಎಲ್ಲರಿಗೂ ಅಂದರೆ ಬಿಪಿಎಲ್ ಹಾಗೂ ಎಪಿಎಲ್ ದಾರಾರಿಗೂ ಕೂಡ ಉಚಿತ ಕರೆಂಟ್ ಅನ್ನು ಪ್ರತಿ ತಿಂಗಳು ನೀಡಲಾಗುತ್ತಿದೆ ಯಾವುದೇ ಜಾತಿ ಭೇದ ಭಾಷೆ ಯಾವುದರ ಅನ್ವಯವಿಲ್ಲದೆ ಉಚಿತವಾಗಿ ಸಂಪೂರ್ಣ ವಿದ್ಯುತ್ತನ್ನು ಸರ್ಕಾರವು ರಾಜ್ಯದ ಜನತೆಗೆ ನೀಡಲು ಮುಂದಾಗಿದೆ.

ಸದ್ಯ ಈ ಯೋಜನೆಯು ರಾಜ್ಯದ ಜನತೆಗೆ ಜುಲೈ 1 ರಿಂದ ಸಿಗಲಿದ್ದು ಈವರೆಗೆ ಬಾಕಿ ಉಳಿಸಿಕೊಂಡಿರುವ ಸಂಪೂರ್ಣ ವಿದ್ಯುತ್ ಬಿಲ್ಲನ್ನು ಸರ್ಕಾರಕ್ಕೆ ಪಾವತಿ ಮಾಡಲೇಬೇಕು ಒಂದು ವೇಳೆ ನೀವೇನಾದರೂ ಈವರೆಗೆ ಬಾಕಿ ಉಳಿಸಿಕೊಂಡಿರುವ ಯಾವುದೇ ವಿದ್ಯುತ್ ಬಿಲ್ ಪಾವತಿ ಮಾಡದೆ ಇದ್ದಲ್ಲಿ ನಿಮ್ಮ ಮನೆಯ ಕರೆಂಟ್ ಸ್ತಗಿತಗೊಳಿಸಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಅಧಿಕೃತ ಆದೇಶ ಹೊರಡಿಸಿದ್ದಾರೆ.

ಈ ಯೋಜನೆಯು ಜುಲೈ ಒಂದರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ

ಈ ಯೋಜನೆಯು ಅಧಿಕೃತವಾಗಿ ಜುಲೈ ಒಂದರಿಂದ ಜಾರಿಗೆ ಬರಲಿದ್ದು ನೀವು ಜುಲೈ ಒಂದರಿಂದ ಆಗಸ್ಟ್ ಒಂದರವರೆಗೆ ಬಳಸುವ ಸಂಪೂರ್ಣ ವಿದ್ಯುತ್ ಬಿಲ್ಲನ್ನು ಇನ್ನು ಮುಂದೆ ಸರ್ಕಾರವೇ ಪಾವತಿ ಮಾಡಲಿದೆ. ಆದರೆ  ಈವರೆಗೆ ನೀವು ಬಳಸಿರುವ ಸಂಪೂರ್ಣ ವಿದ್ಯುತ್ ಬಿಲ್ಲನ್ನು ಅಂದರೆ ಜೂನ್ ತಿಂಗಳನ್ನು ಕೂಡ ಸೇರಿಸಿ ನೀವು ನಿಮ್ಮ ವಿದ್ಯುತ್ ಬಿಲ್ಲನ್ನು ಸರ್ಕಾರಕ್ಕೆ ಪಾವತಿ ಮಾಡಬೇಕು ಈ ಯೋಜನೆ  ಅಡಿಯಲ್ಲಿ  ಜುಲೈ ಒಂದರಿಂದ ಉಚಿತ ವಿದ್ಯುತ್ತನ್ನು ವಿತರಣೆ ಮಾಡಲಾಗುತ್ತಿದೆ.

ಲೇಖನವನ್ನು ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು ಶುಭದಿನ!

 

error: Content is protected !!